ಗ್ಯಾಂಗ್ ವಾರ್ ಇಬ್ಬರ ಹತ್ಯೆ

Kannada News

26-09-2017

ಮಂಗಳೂರು: ಶರತ್​ ಮಡಿವಾಳ ಹತ್ಯೆ ಮಾಸುವ ಮುನ್ನವೆ, ಕರಾವಳಿಯಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ನಿನ್ನೆ ತಡರಾತ್ರಿ ರೌಡಿಗಳ ನಡುವೆ ಗ್ಯಾಂಗ್‌ ವಾರ್‌ ನಡೆದಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಮಂಗಳೂರಿನ ‌ಅಡ್ಯಾರು ಎಂಬಲ್ಲಿ ಈ ಘಟನೆ ನಡೆದಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ರೌಡಿಗಳ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಝಿಯಾ, ಫಝಲ್ ಹತ್ಯೆಯಾದ ರೌಡಿಗಳು. ಘಟನೆಯಲ್ಲಿ ಫಯಾಜ್, ಮುಶ್ಕಾತ್, ಹಮೀಜ್ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಐದು ಮಂದಿ ರೌಡಿ ಶೀಟರ್ ​ಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ