ಟಿವಿ9 ಗೂ ಬೀಸಿತು ಉದಯ ಗಾಳಿ !

Kannada News

26-09-2017

ಟಿವಿ9 ನ್ಯೂಸ್ ಚಾನಲ್, ಕಳೆದ ಒಂದು ದಶಕದಿಂದಲೂ ರಾಜ್ಯದ ನಂಬರ್ 1 ಸುದ್ದಿವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಿವಿ9 ನ್ಯೂಸ್ ಚಾನಲ್‌ ನ ಆರಂಭದ ದಿನದಿಂದಲೂ ಅಲ್ಲಿ ಉದ್ಯೋಗಿಗಳಾಗಿದ್ದವರಲ್ಲಿ ಬಹುತೇಕರು ಬೇರೆ ಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರಬಿದ್ದಿದ್ದರು. ಆದರೆ, ಮೊದಲ ದಿನದಿಂದಲೂ ಅಲ್ಲೇ ಇದ್ದು, ಟಿವಿ9 ಯಶೋಗಾಥೆಯ ರಥದ ಎರಡು ಕುದುರೆಗಳಂತಿದ್ದ ರವಿಕುಮಾರ್ ಮತ್ತು ಮಾರುತಿ ಇದೀಗ ಅಲ್ಲಿಂದ ಹೊರನಡೆದಿದ್ದಾರೆ. ಟಿವಿ9 ಚಾನಲ್‌ ನ ಇತರ ಉದ್ಯೋಗಿಗಳ ಪಾಲಿಗೆ, ವರ ಮತ್ತು ಶಾಪ ಎರಡನ್ನೂ ನೀಡುವಷ್ಟು ಶಕ್ತಿವಂತರಾಗಿ ಬೆಳೆದಿದ್ದ ಇವರಿಬ್ಬರ ನಿರ್ಗಮನಕ್ಕೆ ಕಾರಣಗಳು ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇವರಿಬ್ಬರೂ ಹೊಸ ನ್ಯೂಸ್ ಚಾನಲ್ ಒಂದನ್ನು ಕಟ್ಟಲು ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದ ಆರಂಭಿಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣವಾಗಿವೆ ಎಂದು ಹೇಳಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ