ನಾನೂ ಕೂಡ ಟಿಕೇಟ್ ಆಕಾಂಕ್ಷಿ..!

Kannada News

26-09-2017

ಚಿತ್ರದುರ್ಗ: 2018ರ ವಿಧಾನ ಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನು ಟಿಕೇಟ್ ಆಕಾಂಕ್ಷಿಗಳಲ್ಲಿ ಕಾತರ ಮತ್ತು ದುಗುಡ ಹೆಚ್ಚಾಗಿದೆ. ರಾಜಕೀಯವಲಯದಲ್ಲದೇ ಸಿನಿಮಾ ರಂಗದ ಹಲವರಲ್ಲಿ ಚುನಾವಣೆ ಆಸಕ್ತಿ ಕೆರಳಿಸಿದೆ, ಕಳೆದ ಕೆಲ ದಿನಗಳ ಹಿಂದಷ್ಟೇ ಉಪೇಂದ್ರ ಅವರು ರಾಜಕೀಯಕ್ಕೆ ಕಾಲಿರಿಸಿರುವ ವಿಚಾರ ಎಲ್ಲರಿಗು ಗೊತ್ತಿರುವಂತದೇ. ಆದರೆ ಇದೀಗ ನಟಿಯೊಬ್ಬರು ನಾನೂ 2018ರ ಚುನಾವಣೆಯ ಟಿಕೇಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಹೌದು ನಟಿ ಭಾವನಾ ಅವರು ನಾನು ಸಹ ಮುಂದಿನ 2018 ರ ವಿಧಾನಸಭಾ ಚುನಾವಣೆಯ ಟಿಕೇಟ್ ಆಕಾಂಕ್ಷಿ ಎಂದಿದ್ದಾರೆ.  ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಲಾವಿದೆಯಾಗಿ ಹಾಗೂ ರಾಜಕರಣಿಯಾಗಿ ನಾನು ಸದಾ ಜನರೊಂದಿಗೆ ಇದ್ದೇನೆ. ಸಾರ್ವಜನಿಕರೇ ನನಗೆ ಪ್ರಪಂಚ, ಜನರು ಇಲ್ಲದೆ ನಾನು ಇರಲು ಸಾಧ್ಯವೇ ಇಲ್ಲ, ಕೇವಲ ಮಹಿಳೆ ಎಂಬ ಕಾರಣಕ್ಕೆ ನಾನು ಚುನಾವಣೆ ಸ್ಪರ್ಧಿಸಲು ಟಿಕೇಟ್ ಕೇಳುತ್ತಿಲ್ಲ,  ಬದಲಾಗಿ ಅರ್ಹತೆ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಾರೆ 2018ರ ಚುನಾವಣೆ ತೀವ್ರ ಆಸಕ್ತಿ ಕೆರಳಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ