ಉದಯ ಟಿವಿಯೂ ಖಾಲಿಯಾಯ್ತು!

Kannada News

25-09-2017

ಸನ್ ನೆಟ್ವರ್ಕ್ ಸಮೂಹದ ಕನ್ನಡದ ನ್ಯೂಸ್ ಚಾನಲ್ ಉದಯ ನ್ಯೂಸ್ ಮುಚ್ಚುತ್ತಿರುವ ಸುದ್ದಿ ಖಾತ್ರಿಯಾಗಿ ಎಲ್ಲಾ ನೌಕರರನ್ನು ಮನೆಗೆ ಕಳುಹಿಸಿದ ಬೆನ್ನಲ್ಲೇ ಈಗ ಕನ್ನಡದ ಪ್ರಥಮ ಖಾಸಗಿ ಚಾನಲ್ ಉದಯ ಟಿವಿಗೂ ಸರ್ಜರಿಯಾಗುತ್ತಿರುವುದು ಸುದ್ದಿಯಾಗಿದೆ. ಉದಯ ಟಿವಿಯ ನೌಕರರಿಗೂ ಸೆಟಲ್ಮೆಂಟ್ ಪ್ರಸ್ತಾವನೆಯನ್ನು ಮುಂದಿಟ್ಟು, ತೆಗೆದುಕೊಂಡು ಹೋಗುವ ಇಚ್ಛೆ ಇರುವವರೆಲ್ಲ ಹೋಗಬಹುದೆಂದು ಹೇಳಲಾಗಿದೆ. ಈ ಮಾಹಿತಿ ಹೊರಬರುತ್ತಿದ್ದಂತೆಯೇ ಸುಮಾರು 30 ಮಂದಿ ಹಿರಿಯ ಮತ್ತು ಕಿರಿಯ ನೌಕರರು ತಮಗೆ ಬರಬೇಕಾದ ಹಣ ಪಡೆದು ಹೊರಬಂದಿದ್ದಾರೆ. ಇನ್ನೆರಡು ದಿನಗಳಲ್ಲಿ ಇನ್ನೂ ಬಹಳಷ್ಟು ಮಂದಿ ಹೊರನಡೆಯುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಚೆನ್ನೈ ಕೇಂದ್ರ ಕಚೇರಿಯಲ್ಲಿ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ತೆಗೆದುಕೊಳ್ಳಲಾದ ನಿರ್ಧಾರ ಇದು ಎಂದು ಹೇಳಲಾಗುತ್ತಿದ್ದರೂ, ಇನ್ನೊಂದು ವಲಯದಲ್ಲಿ ಇದು ಹಳೆಯ ಉದ್ಯೋಗಿಗಳನ್ನ ಸಂಸ್ಥೆಯಿಂದ ಖಾಲಿ ಮಾಡಿಸುವ ಹುನ್ನಾರ ಎಂದೂ ಹೇಳಲಾಗುತ್ತಿದೆ. ಇದೆಲ್ಲದರ ಮಧ್ಯೆ ಸನ್ ನೆಟ್ವರ್ಕ್ ಒಳಗೆ ಹಿರಿಯ ಅಧಿಕಾರಿಗಳ ನಡುವೆ ಉಂಟಾಗಿರುವ ಹಿತಾಸಕ್ತಿಗಳ ಸಂಘರ್ಷವೂ ಕಾರಣ ಎಂದು ಅನುಮಾನಿಸಲಾಗುತ್ತಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ