5 ಕೋಟಿ ಹಳೆಯ ನೋಟುಗಳು ವಶ !

Kannada News

25-09-2017

ಬೆಂಗಳೂರು: ಅಮಾನ್ಯಗೊಂಡಿರುವ 1000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು, ಮಹಾಲಕ್ಷ್ಮಿಪುರ ಪೊಲೀಸರು ಬಂಧಿಸಿ 5 ಕೋಟಿ ರೂ. ಮೌಲ್ಯದ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯನಗರದ ಮಹಮದ್ ಅಸ್ಲಾಂ (50), ಬಳ್ಳಾರಿ ಜಿಲ್ಲೆಯ ಕಾಳಿಂಗಪ್ಪ (35) ಮತ್ತು ನೆಲಗದರನಹಳ್ಳಿಯ ಮಂಜುನಾಥ್ (58) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಮಾರುತಿ ಸ್ವಿಫ್ಟ್ ಕಾರು, 5 ಕೋಟಿಯ ಒಂದು ಸಾವಿರ ಮುಖಬೆಲೆಯ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮಹಾಲಕ್ಷ್ಮಿ ಲೇಔಟ್ ನ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಹಳೆಯ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮಹಾಲಕ್ಷ್ಮಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ನೋಟುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿರುವುದು ಸೇರಿದಂತೆ, ಇನ್ನಿತರ ಮಾಹಿತಿಗಾಗಿ ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಉತ್ತರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು 5 ಕೋಟಿ ಹಳೆಯ ನೋಟುಗಳು ವಶ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ