ನಿರಂಜನ್ ಕೊಲೆ: ಪ್ರಮುಖ ಹಂತಕನ ಸೆರೆ !

Kannada News

25-09-2017

ಬೆಂಗಳೂರು: ಐಟಿ ಅಧಿಕಾರಿ ನಿರಂಜನ್ ಕುಮಾರ್ ಅವರ ಪುತ್ರ ಶರತ್ ಹತ್ಯೆಯ ಪ್ರಮುಖ ಆರೋಪಿ ಶಾಂತ ಕುಮಾರ್ ನನ್ನು  ಜ್ಞಾನಭಾರತಿ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜ್ಞಾನಭಾರತಿಯ ಹೆಗ್ಗನಪಾಳ್ಯದ ಶಾಂತಕುಮಾರನನ್ನು ಮೆಜೆಸ್ಟಿಕ್ ಬಳಿ ನಿನ್ನೆ ತಡರಾತ್ರಿ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಬಂಧಿಸಿರುವ ಆರೋಪಿಗಳಾದ ವಿನೋದ್ ಹಾಗೂ ವಿಶಾಲ್, ಶರತ್ನ ಕೈಕಾಲು ಹಿಡಿದುಕೊಂಡಿದ್ದಾಗ ಹಗ್ಗದಿಂದ ಕುತ್ತಿಗೆ ಬಿಗಿದು ಶಾಂತಕುಮಾರ್ ಕೊಲೆಗೈದಿದ್ದನು.

ವಿನೋದ್, ವಿಶಾಲ್ ಬಂಧನದ ನಂತರ ತಲೆಮರೆಸಿಕೊಂಡಿದ್ದ ಶಾಂತ ಕುಮಾರ್ ನ ಕ್ಯಾಬ್ ಕೊಲೆಯಾದ ಸ್ಥಳದ ಬಳಿ ಪತ್ತೆಯಾಗಿತ್ತು. ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿಸಿರುವ ವಿಶಾಲ್, ವಿನೋದ್ ಜತೆ ಶರತ್ ಕೊಲೆ ಮಾಡಿ ಆತನ ದೇಹ ಹೂತು ಹಾಕುವವರೆಗೆ ಕೈಜೋಡಿಸಿದ್ದ ಶಾಂತಕುಮಾರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಶರತ್ ಕೊಲೆಯಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ