ಯೋಜನೆ, ಶಿಕ್ಷಣ, ಲೆಕ್ಕಪತ್ರ ಜೆಡಿಎಸ್ ಗೆ..?

Kannada News

25-09-2017

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ಬೃಹತ್‍ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇದೇ ತಿಂಗಳ 28ರಂದು ನೆಡೆಯಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಕೆ ಖಚಿತವಾಗಿದೆ. ಇನ್ನು ಮೇಯರ್‍, ಉಪಮೇಯರ್‍, ಸ್ಥಾಯಿ ಸಮಿತಿಗೆ ಲಾಬಿ ಆರಂಭವಾಗಿದೆ. ಸದ್ಯ ಜೆಡಿಎಸ್‍ ಪಾಲಿಗೆ ಉಪಮೇಯರ್ ಹಾಗೂ ಈಗಿರುವ 4 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡಲು ಕಾಂಗ್ರೆಸ್‍ ಸಮ್ಮತಿಸಿದೆ. ಅದರಂತೆ ಜೆಡಿಎಸ್ ಸದಸ್ಯರು ನಗರ ಯೋಜನೆ, ಲೆಕ್ಕಪತ್ರ, ಶಿಕ್ಷಣ ಮತ್ತು ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಮುಖ್ಯಸ್ಥರಾಗಲಿದ್ದಾರೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ