ಮಳೆ.. ಮಳೆ.. ಮಳೆ..

Kannada News

25-09-2017

ಬೆಂಗಳೂರು: ನಗರದಲ್ಲೆಡೆ ಇಂದು ಬೆಳಗಿನ ಜಾವದಿಂದ ಭರ್ಜರಿ ಮಳೆ.. ಬೆಂಗಳೂರಿನ ಜನ ಕಣ್ಣು ಬಿಡುವಷ್ಟರಲ್ಲಿ ಸೂರ್ಯನ ಬೆಳಕು ನೋಡುವ ಬದಲು ಮನೆ ಮುಂದೆ ಮಳೆ ನೀರು ಹರಿದು ಹೋಗುವುದನ್ನು ನೋಡಿದರು. ಹೌದು.. ನಗರದೆಲ್ಲೆಡೆ ಭಾನುವಾರ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಳೆ ಬಂದು ಭಾನುವಾರದ ಮೋಜು ಮಸ್ತಿಗೆ ತೊಂದರೆಯಾಗುವುದು ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ವರುಣ ಮಾತ್ರ ಭಾನುವಾರ ಮಧ್ಯರಾತ್ರಿಯಿಂದ ಧರೆಗಿಳಿಯಲು ಪ್ರಾರಂಭಿಸಿದ. ಸೋಮವಾರ ಬೆಳಗಾಗುವವರೆಗೂ ಧಾರಾಕಾರವಾಗಿ ಸುರಿದು, ಬೆಳಗಿನ ಜಾವ ತುಂತುರು ಹನಿಗಳಿಂದ ಎಲ್ಲರನ್ನು ಚುಂಬಿಸಿತು. ಹೀಗಾಗಿ ಕೆಲಸಕ್ಕೆ ಹೋಗುವ ನಗರವಾಸಿಗಳಿಗೆ ಮಳೆ ತೊಂದರೆಯನ್ನುಂಟು ಮಾಡಿತು.

ಬಸ್ಸಿನಲ್ಲಿ ಪ್ರಯಾಣ ಮಾಡುವ ಅನೇಕ ಮಂದಿಗೆ ಮನೆ ಬಿಡುವ ಸಮಯದಲ್ಲಿ ಮಳೆ ಕೊಂಚ ತೊಂದರೆ ಮಾಡಿದರೆ. ಬೈಕ್ ಮೂಲಕ ತೆರಳುವ ಅನೇಕರಿಗೆ ಮಳೆ ನೀರಿನಿಂದ ತುಂಬಿದ ರಸ್ತೆಗಳಲ್ಲಿ ತಗ್ಗು ಗುಂಡಿ ಕಾಣದೆ ನಿಧಾನವಾಗಿ ಸಾಗುವ ಸಂಕಷ್ಟ. ಆದ್ದರಿಂದ ವಾಹನಗಳು ಸರಾಗವಾಗಿ ಸಾಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನೂ ಹತ್ತಿರದ ಕಾಲೇಜ್, ಆಫೀಸ್ ಹೋಗುವ ಜನರು ಛತ್ರಿ ಹಿಡಿದು ಸಾಗುವದು ಸಾಮಾನ್ಯವಾಗಿತ್ತು. ಇದೇ ಸಮಯವನ್ನು ಬಳಸಿಕೊಂಡ ಆಟೋ ಚಾಲಕರು ಪ್ರಯಾಣ ದರ ಕೊಂಚ ಡಿಮ್ಯಾಂಡ್  ಮಾಡುತ್ತಿರುವುದು ಪ್ರಯಾಣಿಕರಿಗೆ ‘ಸಾಕಪ್ಪ ಮಳೆ’ ಎನ್ನುವಂತಾಗಿತ್ತು.

ನಗರದ ಜಯನಗರದ, ವಿಜಯನಗರದ, ಮಾಗಡಿ ರೋಡ್, ಜಿ.ಪಿ ನಗರ, ಮಲ್ಲೇಶ್ವರಂ, ಎಂ.ಜಿ ರಸ್ತೆ, ಶಾಂತಿನಗರ ಮುಂತಾದ ಕಡೆಗಳಲ್ಲೆಲ್ಲಾ ರಾತ್ರಿಯಿಂದಲೇ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.  


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಮಳೆ.. ಮಳೆ.. ಮಳೆ..


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ