ದಾರಿಹೋಕರನ್ನು ಕಂಡು: ಕಳ್ಳರು ಪರಾರಿ !

Kannada News

25-09-2017

ಹಾಸನ: ಹಾಸನ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಕಳ್ಳರು ದರೋಡೆಗೆ ಯತ್ನಿಸಿದ್ದಾರೆ.  ಹಾಸನ ತಾಲ್ಲೂಕಿನ ಸಂಕೇನಹಳ್ಳಿ ಮತ್ತು‌ ಹನುಮಂತಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಹನುಮಂತಪುರದಲ್ಲಿ ಮೆಡಿಕಲ್ ಶಾಪ್ ಶೆಟರ್ ಮುರಿದಿರುವ ಕಳ್ಳರು, ಕಳ್ಳತನಕ್ಕೆ ಪ್ರಯತ್ನಿಸಿದ್ದು, ಈ ವೇಳೆ ದಾರಿಹೋಕರನ್ನು ಕಂಡ ಕೂಡಲೇ ಪರಾರಿಯಾಗಿದ್ದಾರೆ. ಮೆಡಿಕಲ್ ಶಾಪ್ ನಲ್ಲಿ ಯಾವುದೇ ವಸ್ತುಗಳು ಅಥವ ಹಣ ಕಳ್ಳತನವಾಗಿಲ್ಲ ಎಂದು, ಅಂಗಡಿ ಮಾಲೀಕರು ತಿಳಿಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದ ವಿಚಾರವನ್ನು ಮೆಡಿಕಲ್ ಶಾಪ್ ನ ಮಾಲೀಕ ಪೊಲೀಸರ ಗಮನಕ್ಕೆ ತಂದಿದ್ದು, ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ