ಶ್ರೀರಾಮ ಸೇನೆ ಕಾರ್ಯಕರ್ತನ ಕೊಲೆ !

Kannada News

25-09-2017

ಬೆಳಗಾವಿ: ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯು, ಬೆಳಗಾವಿಯಲ್ಲಿ ನಡೆದಿದೆ. ರೋಹಿತ್ ರಾಜು ಪಾಟೀಲ್ (23) ಕೊಲೆಯಾದ ಯುವಕ. ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನಿನ್ನೆ ರಾತ್ರಿ ಗೋಕಾಕ್ ನಗರದಲ್ಲಿ ಏರ್ಪಡಿಸಿದ್ದ, ಅಪ್ಸರಾ ಕೂಟದಲ್ಲಿ, ರೋಹಿತ್ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆಯಲ್ಲಿ, ರೋಹಿತ್ ಜೊತೆಯಲ್ಲಿದ್ದ ಅಕ್ಷಯ್ ಘೋರ್ಪಡೆ ಎಂಬ ಯುವಕನಿಗೂ ಗಂಭೀರ ಗಾಯಗಳಾಗಿವೆ. ಈತನನ್ನು ಗೋಕಾಕ್ ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆಗೆ ಕಾರಣಗಳು ತಿಳಿದು ಬಂದಿಲ್ಲ. ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ