ಬೆಂಕಿಗಾಹುತಿಯಾದ ಕಟ್ಟಡ

Kannada News

23-09-2017

ಕಲಬುರಗಿ: ಕಲಬುರ್ಗಿ ನಗರದ ಸರ್ದಾರ್ ಪಟೇಲ್ ವೃತ್ತದಲ್ಲಿರುವ ಏಷ್ಯನ್ ಪ್ಲಾಜದಲ್ಲಿ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿದಿದ್ದು ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಕ್ಕದ ಬಿಲ್ಡಿಂಗ್ ಗಳಿಗೂ ಬೆಂಕಿ ಕೆನ್ನಾಲಿಗೆ ಹಬ್ಬಿದ್ದು, ಬೆಂಕಿ ಉರಿಗೆ ಬಿಲ್ಡಿಂಗ್ ನಲ್ಲಿದ್ದ ಪಕ್ಷಿ ಇತರೆ ಕ್ರಿಮಿಕೀಟಗಳು ಸುಟ್ಟು ಕರಕಲಾಗಿವೆ. ಖಾನ್ ಕಪಡಿಯಂತ ಪಕ್ಷಿಗಳು, ಇಲಿಗಳು ಬೆಂಕಿಗೆ ಸುಟ್ಟು ಕರಕಲಾದ ದೃಶ್ಯಗಳು ನೋಡುಗರ ಮನ ಘಾಸಿಗೊಳಿಸಿದೆ. ಬೆಂಕಿ ನಂದಿಸಲು ನಾಗರಿಕರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸಹಕಾರ ನೀಡುತ್ತಿದ್ದು, ಇನ್ನು ಕಟ್ಟಡದಲ್ಲಿನ ಎರಡು ಮೂರು ಅಂಗಡಿಗಳಿಗೂ ಬೆಂಕಿ ಹೊತ್ತು ಉರಿದ ಪರಿಣಾಮ ಲಕ್ಷಾಂತರ ರೂಪಾಯಿ ಸಾಮಾಗ್ರಗಳು, ಬೆಲೆಬಾಳುವ ವಸ್ತುಗಳು ಸುಟ್ಟ ಪರಿಣಾಮ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಬಿಲ್ಡಿಂಗ್ ನಲ್ಲಿ ಭಾರೀ ಹೊಗೆ ಆವರಿಸಿದ್ದು, ಬೆಂಕಿಯ ಶಾಖವು ಜೋರಾಗಿತ್ತು. ಅಗ್ನಿ ಶಾಮಕ ಸಿಬ್ಬಂದಿ ಹಾಗೇ ಕಷ್ಟಪಟ್ಟು ಒಳ ನುಗ್ಗುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾರ ಪ್ರಮಾಣ ನಷ್ಟ ಸಂಭಿವಿಸಿದ್ದು, ಬೆಂಕಿ ಸಂಪೂರ್ಣ ನಂದಿದೆ ನಂತರವೇ ನಷ್ಟದ ಲೆಕ್ಕ ದೊರೆಯಲಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ