ಮೈಸೂರಲ್ಲಿ ಕಲೆ ಮತ್ತು ಕ್ರೀಡಾ ವೈಭವ !

Kannada News

23-09-2017

ಮೈಸೂರು: ವಿಶ್ಯವಿಖ್ಯಾತ ಮೈಸೂರು ದಸರಾ ಮಹೋತ್ಸವ, ಮೂರನೇ ದಿನಕ್ಕೆ ಕಾಲಿಟ್ಟದೆ. ಪಾರಂಪರಿಕ ನಡಿಗೆಯೊಂದಿಗೆ ಮೂರನೇ ದಿನದ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಚಿವ ರಮೇಶ್ ಜಾರಕಿಹೊಳಿ ಗೈರಿನ ನಡುವೆ ಉದ್ಘಾಟನೆಗೊಂಡ ಪಾರಂಪರಿಗೆ ನಡಿಗೆ, ಮೈಸೂರಿನ ರಂಗಾಚಾರ್ಲು ಪುರಭವನದಿಂದ ನಗರದ ಹಲವು ಪಾರಂಪರಿಕ ಕಟ್ಟಡಗಳತ್ತ, ಪಾರಂಪರಿಕ ನಡಿಗೆ ಸಾಗಿದೆ. ಮೈಸೂರಿನ ನಾಗರಿಕರು, ಸಾಹಿತಿಗಳು, ಕಾಲೇಜು ವಿದ್ಯಾರ್ಥಿಗಳು ಪಾರಂಪರಿಕ ನಡಿಗೆಯಲ್ಲಿ ಭಾಗಿಯಾಗಿದ್ದಾರೆ.

ಮೈಸೂರು ನಗರದ ಪಾರಂಪರಿಕತೆಯ ಬಗ್ಗೆ ತಿಳಿಸಲು ಆಯೋಜಿಸಿದ್ದ ಪಾರಂಪರಿಕ ನಡಿಗೆ, ಮೊದಲ ಹಂತದಲ್ಲಿ ದೊಡ್ಡ ಗಡಿಯಾರ, ಐತಿಹಾಸಿಕ ಅರಮನೆ, ದೇವರಾಜ ಮಾರುಕಟ್ಟೆ, ಸೇರಿದಂತೆ ಹಲವು ಪಾರಂಪರಿಕ ಕಟ್ಟಡಗಳನ್ನು ನಾಗರೀಕರು ವೀಕ್ಷಣೆ ಮಾಡಿ, ಈ ಕುರಿತು ಪಾರಂಪರಿಕ ಪ್ರಾಮುಖ್ಯತೆ ತಿಳಿದುಕೊಂಡರು.                 

ಇದೇ ವೇಳೆ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ, 11 ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು, ಮೈಸೂರು ಕರಾಟೆ ಅಸೋಷಿಯೇಷನ್ ವತಿಯಿಂದ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಚೆನ್ನಪ್ಪರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

 ರಾಜ್ಯದ ವಿವಿಧ ಜಿಲ್ಲೆಗಳಿಂದ ಕರಾಟೆ ಪಟುಗಳು, ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಮೈಸೂರಿನ ಅರಮನೆಯ ಬಲರಾಮದ್ವಾರದ ಬಳಿಯಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ, ಕ್ರೀಡಾಪಟುಗಳು  ಜಮಾಯಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ