ಅಂತ್ಯಕ್ರಿಯೆ ವೇಳೆ ಮರಣೋತ್ತರ ಪರೀಕ್ಷೆ !

Kannada News

23-09-2017

ಬಳ್ಳಾರಿ: ಹೆಣವನ್ನು ಸ್ಮಶಾನಕ್ಕೆ ಒಯ್ದು ಅಂತ್ಯಕ್ರಿಯೆ ಮಾಡೋದು ಮಾಮೂಲು, ಆದ್ರೆ ಸಶ್ಮಾನದಲ್ಲಿ ಅಂತ್ಯಕ್ರಿಯೆ ಮಾಡಲು ಒಯ್ದಿದ್ದ, ಶವವೊಂದನ್ನು ಶವಗಾರಕ್ಕೆ ತಂದಿರುವ ಅಪರೂಪದ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.

ಯಲ್ಲಮ್ಮ ಎನ್ನುವ 61 ವರ್ಷದ ವೃದ್ದ ಮಹಿಳೆ ಸೆಪ್ಟೆಂಬರ್ 4ರಂದು ಮನೆಯಿಂದ ಹೊರಬಂದಾಗ ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದರು. ವೃದ್ಧ ಮಹಿಳೆ ರಸ್ತೆ ಯಲ್ಲಿ ಬಿದ್ದಿದನ್ನು ಕಂಡ ಸ್ಥಳೀಯರು ಯಲ್ಲಮ್ಮನನ್ನು ವಿಮ್ಸ್ ಆಸ್ಪತ್ರೆಗೆ ದಾಖಲು‌ ಮಾಡಿದ್ದರು,  ಆದ್ರೆ ಮನೆಯವರು ಯಲ್ಲಮ್ಮ ಕಾಣೆಯಾಗಿದ್ದಾಳೆಂದು ಹುಡಿಕಿ ಅಂತಿಮವಾಗಿ ವಿಮ್ಸ್  ಆಸ್ಪತ್ರೆಯಲ್ಲಿ ಇರುವುದನ್ನು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸುತ್ತಿದ್ದರು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದೆ ಯಲ್ಲಮ್ಮ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿತ್ತು, ಯಲ್ಲಮ್ಮನ ಸಂಬಂಧಿಕರು ಸಂಜೆ ಅಂತ್ಯಕ್ರಿಯೆ ನಡೆಸಲು ಬಳ್ಳಾರಿಯ, ಆಲದಹಳ್ಳಿ ಗ್ರಾಮದ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಏಕಾಏಕಿ  ವಿಮ್ಸ್ ಆಸ್ಪತ್ರೆ ಹಾಗೂ ಕೌಲಬಜಾರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಮಶಾನಕ್ಕೆ ಓಡಿ ಬಂದು, ಅಂತ್ಯಕ್ರಯೆ ತಡೆದು ಯಲ್ಲಮ್ಮನ ಶವವನ್ನು ಆಸ್ಪತ್ರೆಯ ಶವಗಾರಕ್ಕೆ ತಂದಿದ್ದಾರೆ.

ಯಲ್ಲಮ್ಮ ವಿಮ್ಸ್ ಆಸ್ಪತ್ರೆಗೆ ದಾಖಲಾದ ವೇಳೆ, ವಿಮ್ಸ್ ಸಿಬ್ಬಂದಿ ಮತ್ತು ಪೊಲೀಸರು ಅನಾಮದೇಯ ಮಹಿಳೆ ಎಂದು ದಾಖಲಿಸಿಕೊಂಡಿದ್ದರು. ಹೀಗಾಗಿ ಇಂದು ಆಕೆ ಸತ್ತ ನಂತರ ಮರಣೋತ್ತರ ಪರೀಕ್ಷೆ ಮಾಡಲು ಸಂಬಂಧಿಕರ ಮನವೊಲಿಸಿ ಯಲ್ಲಮ್ಮನ ಶವವನ್ನು ಶವಾಗಾರಕ್ಕೆ ತಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ