ಪೊಲೀಸರಿಗೆ ಚಳ್ಳೆಹಣ್ಣು ತನ್ನಿಸಿದ ಕಳ್ಳ !

Kannada News

23-09-2017

ಉಡುಪಿ: ಮೆನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆಯು, ಉಡುಪಿಯಲ್ಲಿ ನಡೆದಿದೆ. ಜಿಲ್ಲೆಯ ಕುಂದಾಪುರದ ಆಜ್ರಿಯಲ್ಲಿ ನಿವಾಸಿ, ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷೆಯಾಗಿದ್ದ ಮಾಲತಿ ಕುಮಾರ್ ಎಂಬುವರ ಮನೆಯಲ್ಲಿ, ಯಾರೂ ಇಲ್ಲದ ವೇಳೆ ಹೊಂಚು ಹಾಕಿರುವ ಕಳ್ಳರು, ಸುಮಾರು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಆಜ್ರಿ ಹೆದ್ದಾರಿ ಬಳಿ ಇರುವ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಪ್ರದೀಪ್ ಶೆಟ್ಟಿ ಎಂಬ ವ್ಯಕ್ತಿ ಕಳ್ಳತನ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಈ ವೇಳೆ ಈತನ ಹುಡುಕಾಟ ನಡೆಸುತ್ತಿರುವಾಗ ಸಿಕ್ಕಿದಂತೆ ಸಿಕ್ಕಿ,  ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಪ್ಪಿಸಿಕೊಂಡು ಹೋಗಿದ್ದಾನೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಉಡುಪಿ ಮನೆ ಬಾಗಿಲು ಮುರಿದು ಕಳ್ಳತನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ