ಮೋದಿ ಸರ್ಕಾರದಿಂದ ಮದ್ಯ ನಿಷೇಧ..!

Kannada News

22-09-2017

ಬಿಹಾರ, ಗುಜರಾತ್, ಹರಿಯಾಣ, ಮಣಿಪುರ, ಮಿಜೋರಾಮ್, ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪಾನ ನಿಷೇಧ ಜಾರಿಯಲ್ಲಿದೆ. ಪಾನ ನಿಷೇಧದ ಪರ ಮತ್ತು ವಿರೋಧವಾಗಿ ಹಲವಾರು ಅಭಿಪ್ರಾಯಗಳು ಇದ್ದೇ ಇವೆ. ಆದರೆ ಇದೀಗ, ಕೇಂದ್ರ ಸರ್ಕಾರ ದೇಶಾದ್ಯಂತ ಪಾನ ನಿಷೇಧ ಜಾರಿ ಸಂಬಂಧ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೋರಿ ಪತ್ರ ಬರೆದಿದೆ. ಲೋಕಸಭೆಯಲ್ಲಿ ಪಾನ ನಿಷೇಧದ ಬಗ್ಗೆ ಪ್ರಸ್ತಾಪವಾದ ಬಳಿಕ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿಗಳು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರಕ್ಕೂ ಈ ಬಗ್ಗೆ  ಪತ್ರ ಬಂದಿದ್ದು, ರಾಜ್ಯದಲ್ಲಿ ಪಾನ ನಿಷೇಧದ ಸಾಧಕ ಬಾದಕಗಳ ಬಗ್ಗೆ ವರದಿ ಸಲ್ಲಿಸುವಂತೆ ಅಬಕಾರಿ ಆಯುಕ್ತರ ಕಚೇರಿಯಿಂದ ಎಲ್ಲಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಪಾನ ನಿಷೇಧ ಜಾರಿಗೆ ತರುವ ಅಥವ ತರದೇ ಇರುವ ವಿಚಾರದ ಬಗ್ಗೆ ಯಾವ ರೀತಿಯ ಚರ್ಚೆಗಳು ನಡೆಯಬಹುದು ಮತ್ತು ಅಂತಿಮವಾಗಿ ಏನಾಗಬಹುದು ಅನ್ನುವ ವಿಚಾರ ಕೂತೂಹಲಕರವಾಗಿದೆ.


ಸಂಬಂಧಿತ ಟ್ಯಾಗ್ಗಳು

ಪಾನ ನಿಷೇಧ ಆಗುತ್ತಾ..? ಆಗುತ್ತಾ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Nice platform for information and Intrecation
  • Dr Rajesh A
  • Homoeopathic Doctor