ಸಚಿವರಿಗೆ ಚಾಲೆಂಜ್ ಹಾಕಿದ ಬಾಲಕಿ..

Kannada News

22-09-2017

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸವಲತ್ತು ಹಾಗೂ ಅತ್ಯುತ್ತಮ ಭೋದನಾ ವ್ಯವಸ್ಥೆ ಕಲ್ಪಿಸಿದರೆ ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರುವುದಾಗಿ, ಸಚಿವರು ಹಾಗು ಸಿಎಂಗೆ ಬಾಲಕಿಯೊಬ್ಬಳು ಓಪನ್ ಚಾಲೆಂಜ್ ಹಾಕಿದ್ದಾಳೆ. ಚಾಲೆಂಜ್ ಹಾಕಿದ ಬಾಲಕಿ, ಚಿತ್ರದುರ್ಗದ ವಿದ್ಯಾವಿಕಾಸ ಶಾಲೆ ವಿದ್ಯಾರ್ಥಿನಿ ನಯನ ಎಂದು ತಿಳಿದು ಬಂದಿದೆ, ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ, ಆದರೆ ಜನಪ್ರತಿನಿಧಿಗಳು ಮಾತ್ರ ಸರ್ಕಾರಿ ಶಾಲೆಗೆ ಸೇರಿ ಎಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ ಎಂದು ಸರ್ಕಾರವನ್ನು ಟೀಕಿಸಿದ ನಯನ, ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದ್ದ ಸಚಿವ ಹೆಚ್.ಆಂಜನೇಯ ಅವರಿಗೆ ತಿರುಗೇಟು ನೀಡಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಸಂವಿಧಾನ ರಚಿಸಿದ್ದಾರೆ, ಸರ್.ಎಂ ವಿಶ್ವೇಶ್ವರಯ್ಯ, ವಿಜ್ಞಾನಿ ಯುಆರ್ ರಾವ್ ಸೇರಿದಂತೆ ಹಲವಾರು ಗಣ್ಯರು ಸರ್ಕಾರಿ ಶಾಲೆಯಲ್ಲಿ ಕಲಿತು ಅಪಾರ ಸಾಧನೆ ಮಾಡಿದ್ದಾರೆ, ಹೀಗಾಗಿ ಸರ್ಕಾರಿ ಶಾಲೆಯನ್ನು ಉದಾಸೀನ ಮಾಡಬೇಡಿ ಎಂದು ಕರೆ ನೀಡಿದ್ದ ಸಚಿವ ಆಂಜನೇಯ ಅವರನ್ನು ಅಡ್ಡಗಟ್ಟಿ, ತರಾಟೆಗೆ ತೆಗೆದುಕೊಂಡ ಬಾಲಕಿ ಚಾಲೆಂಜ್ ಹಾಕಿದ್ದಾಳೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ