ಅಸಭ್ಯ ವರ್ತನೆ: ಅರೆಬೆತ್ತಲೆ ಮೆರವಣಿಗೆ !

Kannada News

22-09-2017 419

ಬೆಳಗಾವಿ: ಮಹಿಳೆಯರ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆಯು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ಪಟ್ಟಣದ ಅರಳಿಗಿಡ ಓಣಿಯಲ್ಲಿ, ದಾವಲ್ ಉಸ್ತಾದ್ ಎಂಬ ವ್ಯಕ್ತಿ, ಮದ್ಯಪಾನ ಮಾಡಿ, ಮಹಿಳೆಯರ ಜೊತೆಗೆ ಅಸಭ್ಯ ವರ್ತನೆ ತೋರುತ್ತಿದ್ದ, ಈತನ ವರ್ತನೆ ಮಿತಿಮೀರುತ್ತಿದ್ದಂತೆ, ಇದನ್ನು ಗಮನಿಸಿದ ಸ್ಥಳೀಯರು ದಾವಲ್ ನನ್ನು ಕಟ್ಟಿಹಾಕಿ ಮನಬಂದಂತೆ ತೀವ್ರವಾಗಿ ಥಳಿಸಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ