ಯಡ್ಡಿ ವಿರುದ್ಧ ಎಫ್ಐಆರ್: ಹೈಕೋರ್ಟ್ ತಡೆ !

Kannada News

22-09-2017

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಬಿ.ಎಸ್.ವೈ ಗೆ ಬಿಗ್ ರಿಲೀಫ್ ದೊರೆತಂತಾಗಿದೆ. ಎಸಿಬಿ ದಾಖಲಿಸಿದ್ದ ಎಫ್.ಐ.ಆರ್.ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಡಿನೋಟಿಫಿಕೇಷನ್ ಸಂಬಂಧ ಎಸಿಬಿ ದಾಖಲಿಸಿದ್ದ ಎರಡು ಎಫ್.ಐ.ಆರ್. ಗೆ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಆದೇಶ ನೀಡಿದೆ. ಎಫ್.ಐ.ಆರ್ ದಾಖಲಿಸಲು ವಿಳಂಬ ಮಾಡಲಾಗಿದೆ, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಭೀತುಪಡಿಸುವ ದಾಖಲೆಗಳಿಲ್ಲ, ಒಂದೇ ದೂರಿನಲ್ಲಿ ಎರಡು ಎಫ್.ಐ.ಆರ್ ದಾಖಲಿಸುವುದು ಕಾನೂನು ಬಾಹಿರ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ದೂರು ದಾಖಲಾಗಿದೆ. ಡಿನೋಟಿಫೈ ಲಾಭ ಮಾಡಿ ಲಾಭ ಮಾಡಿಕೊಂಡಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಈ ಅಂಶಗಳನ್ನು ಆಧರಿಸಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ