ವೈದ್ಯರ ನಿರ್ಲಕ್ಷ್ಯ 4 ಶಿಶುಗಳು ಸಾವು !

Kannada News

22-09-2017

ಮೈಸೂರು: ಮೈಸೂರಿನ ಚೆಲುವಾಂಬ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ನವಜಾತ ಶಿಶುಗಳು ಸಾವನ್ನಪ್ಪಿದ್ದು, ಆತಂಕ ಸೃಷ್ಟಿಸಿದೆ. ಕಳೆದ ರಾತ್ರಿಯಿಂದ ಮೂರು ನವಜಾತ ಶಿಶುಗಳು ಮೃತಪಟ್ಟಿವೆ ಎನ್ನಲಾಗಿದ್ದು, ಅದರೆ ಗರ್ಭಿಣಿ ಮಹಿಳೆಯರ ಸಂಬಂಧಿಕರು ಕಳೆದ ರಾತ್ರಿಯಿಂದ ಮೃತ ಪಟ್ಟ ಶಿಶುಗಳ ಸಂಖ್ಯೆ ನಾಲ್ಕು ಎಂದು ತಿಳಿಸಿದ್ದಾರೆ. ಈ ಕುರಿತು ಶಿಶುಗಳು ಅನಾರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ಅಧೀಕ್ಷಕರು ಹೇಳಿದರೆ, ಕಿರಿಯ ಡಾಕ್ಟರ್ ಗಳಿಂದ ಶಸ್ತ್ರ ಚಿಕಿತ್ಸೆ ಮಾಡಿಸಿರುವುದರ ಜೊತೆಗೆ, ನವಜಾತ ಶಿಶುಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದಲೇ ಶಿಶುಗಳು ಸಾವನ್ನಪ್ಪಿವೆ ಎಂದು ಸಾರ್ವಜನಿಕರು, ಪೋಷಕರು ಆರೋಪಿಸಿದರು. ಕೂಡಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ