ಜಾತ್ರೆ ಹಣ ಡಬ್ಬದಲ್ಲಿ ಸಿನಿಮಾ..?

Kannada News

22-09-2017

ಬಳ್ಳಾರಿ: ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ಮೋಡ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಳ್ಳಾರಿಯ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಉತ್ತಮ ಮಳೆಯಾಗಿದೆ. ಈ ಮೊದಲು ನಡೆಸಿದ ಮೋಡ ಬಿತ್ತನೆ ಉತ್ತಮ ಫಲ ನೀಡಿದೆ‌ ಎಂದರು. ಇನ್ನೂ ರಾಜ್ಯದ ಯಾವ ಭಾಗದಲ್ಲಿ ಮಳೆಯ ಕೊರತೆ ಇದೆ ಅಲ್ಲಿ ಮೋಡನೆ ಕಾರ್ಯ ಮುಂದುವರೆಯಲಿ ಎಂದರು.

ಇನ್ನು ಬಿಬಿಎಂಪಿ ಮೇಯರ್ ಆಯ್ಕೆ ವಿಷಯದಲ್ಲಿ ಡಿ.ಕೆ.ಶಿ ಸಹೋದರರು ತಮ್ಮ ಬೆಂಬಲಿಗರಿಗೆ ನೀಡಿ ಎಂದು ಕೇಳಿದ್ದಾರೆ ಅಷ್ಟೇ ಭಿನ್ನಮತ ಅಲ್ಲ ಎಂದರು.

ಅಷ್ಟೇ ಅಲ್ಲದೇ ಬಿಜೆಪಿ ಕೇಂದ್ರ ಸಚಿವರು ಎಲ್ಲವನ್ನೂ ನಾವೇ ಮಾಡಿದ್ದೇವೆ ಎಂದು ಬರೀ ಸುಳ್ಳು ಹೇಳುತ್ತಿದ್ದಾರೆ. ಏನು ಮಾಡಿದ್ದೇವೆ ಎಂದು ಸ್ಪಷ್ಟತೆ ಇಲ್ಲ. ಬರೀ ಜಾತ್ರೆಯಲ್ಲಿ ಜನರಿಂದ ಹಣ ಪಡೆದು ಡಬ್ಬದಲ್ಲಿ ಸಿನಿಮಾ ತೋರಿಸಿದಂತೆ ಮಾಡುತ್ತಿದ್ದಾರೆ ಎಂದು ಚೇಡಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ