ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ..!

Kannada News

22-09-2017

ಹಾಸನ: ಕಾಡಾನೆಗಳ ದಾಳಿಯಿಂದ 4 ಎಕರೆ ಪ್ರದೇಶದಲ್ಲಿ, ಬೆಳೆದಿದ್ದ ಜೋಳ ಭಾಗಶಃ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಜೇಂದ್ರಪುರದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಕುರಿತು ಹಲವಾರು ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗದಿದ್ದು, ಇದೀಗ ರೈತರು ಬೆಳೆದ ಬೆಳೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಎಂಬಂತಾಗಿದೆ. ಫಸಲಿಗೆ ಬಂದಿದ್ದ ಜೋಳದ ಗದ್ದೆ ಮೇಲೆ ಕಾಡಾನೆಗಳ ಹಾವಳಿ ನಡೆಸಿ ಬೆಳೆ ನಾಶಪಡಿಸಿವೆ. ಇನ್ನು ಇಷ್ಟಾದರು ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ