ವಂಚನೆ ಎಸಗಿದ್ದರಾ ಪೂಜಾಗಾಂಧಿ ತಂದೆ..?

Kannada News

21-09-2017

ಬೆಂಗಳೂರು: ಕನ್ನಡದ ಖ್ಯಾತ ನಟಿ, ಮುಂಗಾರು ಮಳೆ ಖ್ಯಾತಿಯ ಪೂಜಾಗಾಂಧಿ ಅವರ ತಂದೆ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಪೂಜಾ ಅವರ ತಂದೆ ಪವನ್ ಕುಮಾರ್ ಗಾಂಧಿಯನ್ನು ನಗರ ಪೊಲೀಸರು ಹುಡುಕುತ್ತಿದ್ದಾರೆ.

ನಟಿ ಪೂಜಾಗಾಂಧಿ ಅವರ ತಂದೆ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ ಚೆಕ್ ನೀಡಿದ್ದರು. ಆದರೆ, ಇದೀಗ ಈ ಚೆಕ್ ಬೌನ್ಸ್ ಆಗಿದ್ದು, ಮಳಿಗೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ನ 27 ನೇ ಎಸಿಎಂಎಂ ನ್ಯಾಯಾಲಯವು ವಂಚನೆ ಎಸಗಿದ ಪವನ್ ಕುಮಾರ್ ಗಾಂಧಿಯನ್ನು ಕೋರ್ಟ್ ಮುಂದೆ ತಂದು ನಿಲ್ಲಿಸುವಂತೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ನಗರ ಪೊಲೀಸರು ಅರೆಸ್ಟ್ ವಾರೆಂಟ್ ಹಿಡಿದು ಪೂಜಾ ಅವರ ತಂದೆಗಾಗಿ ಶೋಧ ನಡೆಸುತ್ತಿದ್ದು, ಬನಶಂಕರಿಯಲ್ಲಿರುವ ಪೂಜಾ ಅವರ ಅಪಾರ್ಟ್ ಮೆಂಟ್ ಕೆಲ ತಿಂಗಳ ಹಿಂದೆಯೇ ಬೀಗ ಬಿದ್ದಿದ್ದು, ಎಲ್ಲರೂ ಮುಂಬೈಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ