ಅಣ್ಣನನ್ನೇ ಕೊಂದ ತಮ್ಮ !

Kannada News

21-09-2017

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಕೊನೆಗೊಂಡಿದೆ. ಬಾಣಸವಾಡಿಯ ಕರಿಯಣ್ಣಪಾಳ್ಯದ ನಿವಾಸಿ ಆಸ್ಕರ್ ರಜಾರಿಯೋ (49) ಕೊಲೆಯಾದ ದುರ್ದೈವಿಯಾಗಿದ್ದು, ಈತನನ್ನು ಈತನ ತಮ್ಮ ರಾಯಿಸನ್ ರಜಾರಿಯೊ (40) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆ ಬುಧುವಾರ ತಡರಾತ್ರಿ ನಡೆದಿದೆ. ಆರೋಪಿ ರಾಯಿಸನ್ ರಜಾರಿಯೋ ತಾಯಿಗೆ ಹುಷಾರಿರಲಿಲ್ಲ, ಹೀಗಾಗಿ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವಾಪಸ್ ಮನೆಗೆ ಬಂದಾಗ ಮನೆ ಬೀಗ ಹಾಕಿತ್ತು.

ಕೊಲೆಯಾದ ಅಣ್ಣ ಆಸ್ಕರ್ ಮನೆಗೆ ಬೀಗ ಹಾಕಿಕೊಂಡು ಮೊಟ್ಟೆ ತರಲು ಹೋಗಿದ್ದ, ಈತ ಮೊಟ್ಟೆ ತೆಗೆದುಕೊಂಡು ಮನೆಗೆ ಬಂದಾಗ ಅಣ್ಣ ತಮ್ಮಂದಿರ ನಡುವೆ ಮನೆಗೆ ಬೀಗ ಹಾಕಿ ಹೊರ ಹೋಗಿದ್ದಕ್ಕೆ ಜಗಳ ಆಗಿದೆ.  ಆಗ ಸಿಟ್ಟಿಗೆದ್ದ ಅಣ್ಣ, ಆಸ್ಕರ್ ತಮ್ಮನ ಮೇಲೆ ಮೊಟ್ಟೆ ಎಸೆದಿದ್ದಾನೆ, ಇದರಿಂದ ಕುಪಿತಗೊಂಡ ತಮ್ಮ ಚಾಕುವಿನಿಂದ ಅಣ್ಣನ ಎದೆಗೆ ಇರಿದಿದ್ದು, ಆಸ್ಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಸಂಬಂಧ ಬಾಣಸವಾಡಿ ಪೊಲೀಸರು ಮೊಕದ್ದಮೆ ದಾಖಲಿಸಿ ಆರೋಪಿ ರಾಯಿಸನ್ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೇಂಟ್ ಕೆಲಸ ಮಾಡುತ್ತಿದ್ದು, ಕೊಲೆಯಾದ ಆಸ್ಕರ್ ಫ್ಲಂಬರ್ ವೃತ್ತಿಯವ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಅಣ್ಣನನ್ನೇ ಕೊಂದ ತಮ್ಮ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ