ಎಸ್.ಎಂ ಕೃಷ್ಣ ಅಳಿಯ: ಕಚೇರಿಗಳ ಮೇಲೆ ಐಟಿ ದಾಳಿ

Kannada News

21-09-2017 404

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಗೆ ಐಟಿ ಅಧಿಕಾರಿಗಳು, ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ. ಕಾಫಿ ಡೇ ಮುಖ್ಯ ಕಚೇರಿ, ಮತ್ತು ಎಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ. ಕಾಫಿಡೇ ಮಾಲೀಕ ಸಿದ್ದಾರ್ಥ್ ಒಡೆತನದ ಆಸ್ತಿ, ಕಂಪನಿಗಳ ಮೇಲೆ ಐಟಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಅಲ್ಲದೇ ಐಟಿ ಅಸಿಸ್ಟೆಂಟ್ ಡೈರೆಕ್ಟರ್ ಶರೀಫ್ ನೇತೃತ್ವದ ಹತ್ತು ಮಂದಿಯ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗಿದೆ. ಹೊಟೇಲ್ ಸೆರಾಯ್ ಹಾಗೂ ಎಬಿಸಿ, ಕಾಫಿಡೇ ಗ್ಲೋಬಲ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದ ಮೂಡಿಗೆರೆಯ ರಸ್ತೆಯಲ್ಲಿರುವ ಹೋಟೆಲ್ ಹಾಗೂ ಕಂಪನಿಗಳ ಮೇಲೆ, ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮುಖ್ಯ ಕಚೇರಿಗೆ ಬರುತ್ತಿರುವ ಸಿಬ್ಬಂದಿಯನ್ನ ವಾಪಸ್ ಕಳುಹಿಸಿದರು.

ಅಲ್ಲದೇ ವಿವಿಧ ಜಾಗಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸುತ್ತಿದ್ದು, ಎಬಿಸಿ ಕಚೇರಿಗೆ 8 ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.                       

ಡಿಕೆಶಿ ಆಪ್ತ ರಜನೀಶ್ ಮನೆ ಮೇಲೆ ದಾಳಿ ನಡೆದಿತ್ತು, ಅದರ ಮುಂದಿನ ಭಾಗವಾಗಿ ಇವತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಜನೀಶ್ 20 ವರ್ಷಗಳಿಂದ ಎಬಿಸಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಹಾಸನದಲ್ಲೂ ದಾಳಿ ಮುಂದುವರೆಸಿ, ಸಿದ್ದಾರ್ಥ ಒಡೆತನದ ಕಾಫಿ ಕ್ಯೂರಿಂಗ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಬೇಲೂರು ರಸ್ತೆಯಲ್ಲಿರುವ ಎಬಿಸಿ ಕಾಫಿ ಕ್ಯೂರಿಂಗ್ ಮೇಲೆ, ಮುಂಜಾನೆಯಿಂದ ಐಟಿ ಅಧಿಕಾರಿಗಳಿಂದ ಕಡತಗಳ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ