ಕೇಂದ್ರ ಬಿಜೆಪಿ ನಡೆಗೆ ಕಾಂಗ್ರೆಸ್ ಆತಂಕ..?

Kannada News

21-09-2017

ಮಂಡ್ಯ: ಕೇಂದ್ರದ ಬಿಜೆಪಿ ವರಿಷ್ಠರು ರಾಜ್ಯದತ್ತ ಗಮನ ಹರಿಸ್ತಿರೋ ನಡೆಗೆ ರಾಜ್ಯ ಕಾಂಗ್ರೆಸ್ ನಾಯಕರು ಅತಂಕಗೊಂಡಿದ್ದಾರೆ ಎಂದು, ಚುಂಚನಗಿರಿಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ರಾಜ್ಯದತ್ತ ಗಮನ ಹರಿಸಿರುವ ಬಿಜೆಪಿ ವರಿಷ್ಠರ ನಡೆಯಿಂದ ಕಂಗಾಲಾಗಿರೋ ಕಾಂಗ್ರೆಸ್ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡ್ತಿದ್ದಾರೆ ಎಂದರು.

ವೀರಶೈವ ಲಿಂಗಾಯಿತ ವಿಷಯದಲ್ಲಿ ಜಾತಿ ರಾಜಕಾರಣ ಮಾಡ್ತಿರೋದು ಕಾಂಗ್ರೆಸ್ ನಾಯಕರು, ಈ ವಿಚಾರದಲ್ಲಿ, ನಡೆದಾಡುವ ದೇವರ ಹೆಸರು ತಂದಿದ್ದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಾಮೀಜೀಗಳು ಈಗಾಗಲೇ ಎರಡು ಧರ್ಮ ಒಂದೇ ಎಂದು ಹೇಳಿದ್ರು, ಇವರು ಇನ್ನು ಹೋರಾಟ ಮುಂದುವರೆಸ್ತಿದ್ದಾರೆ ಎಂದರು.

ಇನ್ನು ಪಕ್ಷದ ಹೈಕಮಾಂಡ್ ಸೂಚನೆಯಂತೆ ಯಡಿಯೂರಪ್ಪ ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡ್ತಿದ್ದಾರೆ, ಯಡಿಯೂರಪ್ಪ ಈ ನಡೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ ಎಂದಿದ್ದು, ನಾನು ಕೂಡ ಹೈಕಮಾಂಡ್ ಅದೇಶಕೊಟ್ಟ ಕಡೆ ಸ್ಪರ್ಧೆ ಮಾಡ್ತೀನಿ ಎಂದು ತಿಳಿಸಿದರು.

ಇನ್ನು ಫೋನ್ ಕದ್ದಾಲಿಕೆ ಪ್ರಕರಣದ ಆರೋಪ ಸೃಷ್ಟಿಸಿರೋದು ಸಚಿವ ರಾಮಲಿಂಗಾ ರೆಡ್ಡಿ, ಅವರು ಅದೇಕೆ ಈ ಕೆಲ್ಸ ಮಾಡಿದ್ದಾರೋ ಗೊತ್ತಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ