ರಂಗೋಲಿ ಬಿಡಿಸಿದ ಉಮಾಶ್ರೀ !

Kannada News

21-09-2017

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ-2017, ಮಹೋತ್ಸವದ ಮಹಿಳಾ ದಸರಾ ಕಾರ್ಯಕ್ರಮದ ಪ್ರಯುಕ್ತ, ಮಹಿಳೆಯರಿಗಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಫರ್ಧೆ ಆಯೋಜಿಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಂಗೋಲಿ ಚಿತ್ರ ರಚಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಈ ರಂಗೋಲಿ ಸ್ಪರ್ಧೆಯಲ್ಲಿ ವಯಸ್ಸಿನ ಅಂತರವಿಲ್ಲದೇ  85 ಜನ ಮಹಿಳಾ ಮಣಿಗಳು ಭಾಗವಹಿಸಿದ್ದು , ವಿವಿಧ ಭಂಗಿಯ ವಿನ್ಯಾಸದಲ್ಲಿ ಆಂಬಾರಿ ಹೊತ್ತ ಆನೆ , ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರಿಗೆ ನಮನ, ನೀರನ್ನು ವ್ಯಯ ಮಾಡಬೇಡಿ ಹಾಗೂ ಹುಟ್ಟೋ ಮಗು ಹೆಣ್ಣು ಎಂದು ತಿಳಿದು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಂದೇಶ ಸಾರುವ ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳು ಗಮನ ಸೆಳೆದವು. ಇನ್ನೂ ಉಳಿದ ಆಕರ್ಷಕ ರಂಗೋಲಿಗಳು ಜನರ ಮೆಚ್ಚುಗೆ ಪಡೆದವು. ಅಲ್ಲದೇ ಸಾರ್ವಜನಿಕರು ಆಕರ್ಷಕ ರಂಗೋಲಿಯ ಪಕ್ಕ ನಿಂತು ಫೋಟೋ ತೆಗೆಸಿಕೊಂಡರು.

ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ, ಶೋಭಾ,ವಸುಂದರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

ಮೈಸೂರು ರಂಗೋಲಿ ಹಾಕಿದ ಉಮಾಶ್ರೀ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ