ಮುಂದಿನ 500 ವರ್ಷಕ್ಕೆ ಸಿದ್ದು ಅವ್ರೆ ಸಿಎಂ..?

Kannada News

21-09-2017

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಬಿಟ್ಟು ಉಳಿದ ನಾಯಕರೆಲ್ಲ ಅವರ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ವಿಜಯಪುರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಎಲ್ಲ ನಾಯಕರು, ಕ್ಷೇತ್ರ ಬದಲಾವಣೆ ಮಾಡ್ತಾರೆಂಬುದು ಮಾಧ್ಯಮದವರು ಎಬ್ಬಿಸಿರುವ ಸುದ್ದಿ, ನಾನು ಸೇರಿದಂತೇ ಯಾರೂ ಕ್ಷೇತ್ರ ಬದಲಾವಣೆ ಮಾಡಲ್ಲ, ಈ ಬಗ್ಗೆ ಕೇಂದ್ರ ನಾಯಕರು ನಮ್ಮನ್ನು ಕೇಳಿಯೂ ಇಲ್ಲ ಎಂದರು.

224 ಕ್ಷೇತ್ರದಲ್ಲಿ ಬಿಜೆಪಿ ಬಲಗೊಂಡಿದೆ. ಒಂದು ಕ್ಷೇತ್ರದಿಂದ 4 ಅಭ್ಯರ್ಥಿ ಟಿಕೆಟ್ ಕೇಳ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಇನ್ನು ಫೋನ್ ಕದ್ದಾಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಸಿಬಿಐ ತನಿಖೆಗೆ ವಹಿಸಲಿ ಸತ್ಯಾಸತ್ಯತೆ ಹೊರಬರಲಿದೆ. ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಿರೊ ಸರ್ಕಾರ ಇದ್ರೆ ದೇಶದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾತ್ರ ಎಂದು ಕುಟುಕಿದರು. ಮುಂದಿನ 5 ವರ್ಷಕ್ಕಲ್ಲ, ಮುಂದಿನ 500 ವರ್ಷಕ್ಕೆ ಸಿದ್ದರಾಮಯ್ಯ ಅವ್ರೆ ಮುಖ್ಯಮಂತ್ರಿ ಎಂದು ಲೇವಡಿ ಮಾಡಿದರು.

ಅವ್ರ ಹೈಕಮಾಂಡೂ ಹೇಳಿಲ್ಲ, ಯಾವ ನಾಯಕರು ಸಿದ್ದರಾಮಯ್ಯ ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಿಲ್ಲವೆಂದು ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಪಕ್ಕದಲ್ಲಿ ಬೆಂಕಿ ಹತ್ತಿ ಉರಿತಿದೆ, ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆಂಬ ಸಿದ್ದರಾಮಯ್ಯ ಅವರದ್ದು ತಿರಕನ ಕನಸು ಎಂದರು.

ಪಕ್ಷದಲ್ಲಿ ಮೂರು ಗುಂಪಾಗಿವೆ, ಮತ್ತೆ ನಾನೇ ಸಿಎಂ ಆಗ್ತೆನೆಂದು ಸಿದ್ದರಾಮಯ್ಯ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡ್ತಿರೊ ಅಪಮಾನ, ಮುಂದೆ ನಾನೇ ಸಿಎಂ ಎಂದು ಹೇಳುವ ಸಿದ್ದರಾಮಯ್ಯ, ಮೊದಲು ಯಾವುದಾದರೊಂದು, ಕ್ಷೇತ್ರದಿಂದ ಗೆದ್ದು ಬನ್ನಿ ಎಂದು ಸವಾಲು ಹಾಕಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ