ಮೈಸೂರಲ್ಲಿ ಸಂಭ್ರಮ-ಸಡರಗ !

Kannada News

21-09-2017

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ-2017 ಮಹೋತ್ಸವ ಹಿನ್ನೆಲೆ,  ಸಾಂಸ್ಕೃತಿಕ ನಗರಿಯಲ್ಲಿ ಸಂತಸ ಸಡಗರ ಮನೆಮಾಡಿದೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಅಗ್ರಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದು, ಅರಮನೆ ನಗರಿ, ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಪುಷ್ಪಾರ್ಚನೆಯೊಂದಿಗೆ 2017ನೆ ಸಾಲಿನ ದಸರಾ ವಿಜೃಂಭಣೆಯಿಂದ ನಡೆಯಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ -2017, ಸರ್ಕಾರದಿಂದ ನಡೆಸುವ ನಾಡಹಬ್ಬ ಕಾರ್ಯಕ್ರಮಗಳ ವಿವರ. ನಾಡಹಬ್ಬಕ್ಕೆ ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ರಿಂದ ಅಧಿಕೃತ ಚಾಲನೆಯಾಗಿದ್ದು. ನಂತರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ವೇದಿಕೆ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ದಸರೆಗೂ ಇಂದೇ ಚಾಲನೆ.

ಬೆಳಿಗ್ಗೆ 10-30 ಕ್ಕೆ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಚಾಲನೆ. ನಂತರ 11 ಗಂಟೆಗೆ ಕಲಾಪ್ರದರ್ಶನ ಮತ್ತು ಕಲಾಶಿಬಿರ, ದಸರಾ ಕ್ರೀಡಾಜ್ಯೋತಿಗೆ ಚಾಲನೆ. 11.30ಕ್ಕೆ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ. ಮೊದಲ ಚಿತ್ರವಾಗಿ ಒಂದು ಮೊಟ್ಟೆಯ ಕಥೆ ಚಿತ್ರ ಪ್ರದರ್ಶನವಾಗಲಿದೆ. ನಂತರ ಇದೇ ಸಮಯಕ್ಕೆ ಮಹಿಳಾ ದಸರಾಗೆ ಚಾಲನೆ. ಮಧ್ಯಾಹ್ನ 1 ಗಂಟೆಗೆ ಆಹಾರ ಮೇಳಕ್ಕೆ ಚಾಲನೆ, ನಂತರ 3.30ಕ್ಕೆ ದಸರಾ ನಾಡಕುಸ್ತಿಗೆ ಚಾಲನೆ ಸಿಗಲಿದೆ.

 ಇನ್ನು ಸಂಜೆಯ ಕಾರ್ಯಕ್ರಮಗಳಾದ, ಸಂಜೆ 4 ಫಲಪುಷ್ಪ ಪ್ರದರ್ಶನದ ಜೊತೆಗೆ ರಾಜ್ಯ ದಸರಾ ಕೂಟ, ಇದೇ ವೇಳೆ ಕಾಡಾ ಕಚೇರಿ ಆವರಣದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳಕ್ಕೆ ಚಾಲನೆ ದೊರೆಯಲಿದೆ.  ನಂತರ 5 ಗಂಟೆಗೆ ದಸರಾ ವಸ್ತುಪ್ರದರ್ಶನ ಉದ್ಘಾಟನೆ. ಸಂಜೆ 6 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದಸರಾ ದೀಪಾಲಂಕಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಮಹಾರಾಜ ಓವಲ್ ಮೈದಾನದಲ್ಲಿ ದಸರಾ ಯೋಗ ಜ್ಯೋತಿ ನಡಿಗೆ ನಡೆಯಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


[url=https://onlinecasino.gb.net/#]safe online casinos real money[/url] best online casino play free for real money
  • Aufqfloowl
  • Sales
[url=https://onlinecasino.gb.net/#]online casinos[/url] online casino real money free play slots for free win real money
  • Autmtloowl
  • Sales