ಕೈ ನಾಯಕರ ವಿರುದ್ಧ ಡಿ.ಕೆ ಸುರೇಶ್ ಕಿಡಿ !

Kannada News

20-09-2017

ಬೆಂಗಳೂರು: ಸಂಸದ ಡಿ.ಕೆ ಸುರೇಶ್ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಗೋಷ್ಟಿ ನಡೆಸಿದ್ದಾರೆ, ಸುದ್ದಿಗೋಷ್ಟಿಯಲ್ಲಿ, ಬೆಂಗಳೂರು ಹೊರವಲಯ ಸಾಕಷ್ಟು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಹೊರವಲಯದಲ್ಲಿರುವ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಇದ್ದಾರೆ, ಮೇಯರ್ ಸ್ಥಾನವನ್ನು ಹೊರವಲಯದ ವಿಧಾನ ಸಭಾ ಕ್ಷೇತ್ರದಲ್ಲಿರುವವರಿಗೆ ನೀಡಬೇಕು, ನಮ್ಮ ಲೋಕ ಸಭಾ ಕ್ಷೇತ್ರದಲ್ಲಿ, ಇಬ್ಬರು ಅಭ್ಯರ್ಥಿಗಳಿದ್ದಾರೆ, ವೇಲುನಾಯಕ್, ಆಂಜನಪ್ಪ ಇದ್ದಾರೆ ಅವರಿಗೆ ಮೇಯರ್ ಸ್ಥಾನ ಸಿಗಬೇಕು ಎಂದಿದ್ದಾರೆ.

ಇದೇ ತಿಂಗಳ 28 ರಂದು ಬಿಬಿಎಂಪಿ ಮೇಯರ್ ಚುನಾವಣೆ ಘೋಷಣೆಯಾಗಿದೆ, ಪ್ರತಿವರ್ಷ ಬೆಂಗಳೂರು ವಿಸ್ತರಣೆ ಮಾಡಲಾಗುತ್ತಿದೆ, ಆದರೆ ಯಾವುದೇ ಸರ್ಕಾರ ಬಂದ್ರು ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ ಎಂದರು. ನಮ್ಮ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸುತ್ತಿದೆ, ಮೇಯರ್ ಚುನಾವಣೆ ಬರುತ್ತಿದ್ದಂತೆ ಬಲಿಷ್ಟರನ್ನೆ ನೇಮಕಮಾಡಲಾಗುತ್ತೆ, ಅಭಿವೃದ್ಧಿ ತೋರಿಸಲು ನಮಗೆ ಕಷ್ಟವಾಗುತ್ತಿದೆ ಎಂದರು. ಹೊರಗಿನಿಂದ ಬಂದವರು ಮೂಲಸೌಕರ್ಯ ದಿಂದ ವಂಚಿತರಾಗಿದ್ದಾರೆ, ಅಧಿಕಾರಿಗಳು ಅಪಾರ್ಟ್ ಮೆಂಟ್ ಗಳಿಗೆ ನೀರು ನೀಡುತ್ತಾರೆ, ಬಲಿಷ್ಟರ ಏರಿಯಾಗಳಲ್ಲಿ ಸ್ವಚ್ಚ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಭಾಗದ ಇಬ್ಬರು ಸದಸ್ಯರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು. ಹೊರ ಹೊಲಯದಿಂದ ವೇಲು ನಾಯಕ್, ಅಂಜಿನಪ್ಪ ಅವರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವೇಲುನಾಯಕ್ ರಾಜರಾಜೇಶ್ವರಿ ನಗರ, ಆಂಜಿನಪ್ಪ ಬೇಗೂರು ವಾರ್ಡ್ ನ ಕಾರ್ಪೊರೇಟರ್ ಗಳು. ಪಕ್ಷ ನನ್ನನ್ನು ಕಡೆಗಣಿಸೋದು ಬೇಡ, ಬಿಬಿಎಂಪಿ ಚುನಾವಣಾ ಸಂಬಂಧ ಕರೆದ  ಸಭೆಗೆ ನನ್ನನ್ನು ಕರೆದಿಲ್ಲ, ಹಾಗಾಗೀ ರಾಜ್ಯದ ಜನರಿಗೆ, ನಮ್ಮ ನಾಯಕರಿಗೆ ನಾನು ಇದ್ದೇನೆ ಅಂತ ಈ ಮೂಲಕ ತಿಳಿಸ್ತಾ ಇದ್ದೇನೆ, ಇದು ಡಿ.ಕೆ. ಸುರೇಶ್ ರವರ ಬಂಡಾಯದ ಪ್ರೆಸ್ ಮೀಟ್ ಅಂತ ಕರೆದ್ರೆ ತಪ್ಪಲ್ಲ ಎಂದರು.                       

ನನ್ನ ಹಕ್ಕನ್ನು ನಾನು ಪ್ರತಿ ಪಾದಿಸ್ತಾ ಇದ್ದೇನೆ, ಸುಮ್ಮನೆ ಕೂತ್ರೆ ತಲೆ ಸವರ್ತಾರೆ ನನ್ನನ್ನು ಕಡೆಗಣಿಸೋದು ಸರಿ ಇಲ್ಲ, ಕಳೆದ ಎರಡು ಮೇಯರ್ ಚುನಾವಣೆಯಲ್ಲಿ ನನ್ನನ್ನು ಕಡೆಗಣಿಸಿದ್ರು, ಈ ಬಾರಿ ಕಡೆಗಣಿಸೋದು ಸರಿಯಲ್ಲ ಎಂದು ಹೇಳಿದ್ದಾರೆ. ಜೆಡಿಎಸ್ ಜೊತೆ ಮಾತಾಡಿ ಅಂತ ನನಗೆ ಜವಾಬ್ದಾರಿಗೆ ಕೊಡಲೀ ನಾನೇ ಹೋಗಿ ಮಾತಾಡ್ತೇನೆ,  ಸಿಎಂ ಸಿದ್ದರಾಮಯ್ಯ ಹಾಗೂ ಜಾರ್ಜ್ ಜೊತೆ ಮಾತಾಡ್ತೇನೆ. ಬಿಬಿಎಂಪಿ ಮೇಯರ್ ಚುನಾವಣೆ ಸಂಬಂಧ ನಡೆದ ಸಭೆಗೆ, ನನ್ನನ್ನು ಕರೆದಿದ್ದರೆ, ನಾನು ಇವತ್ತು ಆಕ್ರೋಶ ವ್ಯಕ್ತಪಡಿಸುತ್ತಿರಲಿಲ್ಲ ಎಂದರು. ಕೆಲವರಿಗೆ ಏನಾಗಿದೆ ಅಂದ್ರೆ ಅತ್ರೆ ಹಾಲು ಕುಡಿಸ್ತಾರೆ ಅಂತ ಆಗಿದೆ, ಹಾಗಾಗೀ ಮಾತಾಡೋ ತನಕ ಯಾರು ಅದರ ಬಗ್ಗೆ ತಲೆಕಡಿಸಿಕೊಳ್ಳಲ್ಲ, ನಮ್ಮ ಕ್ಷೇತ್ರದಲ್ಲಿ ನೂರೆಂಟು ಸಮಸ್ಯೆ ಇದೆ, ಅದರ ಪರಿಹಾರಕ್ಕೆ ನಮ್ಮ ಕ್ಷೇತ್ರಕ್ಕೆ ಮೇಯರ್ ಕೊಡಬೇಕು. ಪಕ್ಷದ ವೇದಿಕೆಯಲ್ಲೂ ಚರ್ಚೆ ನಡೆಸಿದ್ದೇನೆ, ಪಕ್ಷದಿಂದ ನಮ್ಮನ್ನ ಕಡಗಣಿಸಲಾಗುತ್ತಿದೆ ಹೀಗಾಗಿ ಅಸಮಧಾನ ಇದೆ, ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ, ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಎಂದು ನೇರವಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿ, ಪಕ್ಷದಲ್ಲಿನ ತಾರತಮ್ಯ ವಿರುದ್ಧ ಬಹಿರಂಗವಾಗಿ ಬಂಡಾಯ ಹೊರ ಹಾಕಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ