ಭ್ರಷ್ಟಾಚಾರಕ್ಕಂತೂ ಕಡಿವಾಣ ಬಿತ್ತು..

Kannada News

20-09-2017

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ಚರ್ಚೆಗಳು ಎಲ್ಲಾ ಕಡೆ ಎಲ್ಲಾ ಮಟ್ಟದಲ್ಲೂ ನಡೆಯುತ್ತಿವೆ.  ನೋಟು ರದ್ದತಿ, ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರವನ್ನು ಟೀಕಿಸುವವರು ಎಲ್ಲಾ ಕಡೆ ಕಂಡುಬರುತ್ತಿದ್ದಾರೆ. ಹಾಗಾದರೆ, ಮೋದಿ ಸರ್ಕಾರ ಏನನ್ನೂ ಸಾಧಿಸಿಲ್ಲವೇ ಎಂಬ ಪ್ರಶ್ನೆ ಕೆಲವರನ್ನಾದರೂ ಕಾಡಲು ಆರಂಭಿಸಿರುವುದು ನಿಜ. ದೆಹಲಿಯ ಸರ್ಕಾರಿ ಗಲ್ಲಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಬೆಳಕಿಗೆ ಬಂದ ಮಾಹಿತಿ ಆಶ್ಚರ್ಯಕರ ಮತ್ತು ಹರ್ಷದಾಯಕವಾಗಿದೆ. ತಾವು ಹೇಳಿದ್ದನ್ನು ಮಾಡದಿದ್ದರೂ, ಪ್ರತಿಯೊಬ್ಬರ ಕಿಸೆಗೆ ಲಕ್ಷಗಟ್ಟಲೆ ಹಣ ಹಾಕದಿದ್ದರೂ ಕೂಡ, ಮೋದಿಯವರು ಭ್ರಷ್ಟಾಚಾರ ತಡೆಯುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂತ್ರಿಗಳಿಂದ ಹಿಡಿದು, ಕಟ್ಟಕಡೆಯ ನೌಕರರವರೆಗೆ, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಭ್ರಷ್ಟಾಚಾರದ ಬಗ್ಗೆ ಭೀತಿಯಿರುವುದು ಮತ್ತು ಎಲ್ಲರ ಮೇಲೂ ಮೋದಿಯವರ ಕಚೇರಿ ಕಣ್ಣಿಟ್ಟಿರುವುದು ನಡುಕ ತಂದಿದೆ. ಏನಿಲ್ಲದಿದ್ದರೂ, ಭ್ರಷ್ಟಾಚಾರಿಗಳಂತೂ ತೆಪ್ಪಗಾಗಿಬಿಟ್ಟಿರುವುದು ಸಾಮಾನ್ಯ ಜನರಿಗೆ ನಿರಾಳ ಉಂಟುಮಾಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ