ಹೆಮ್ಮೆಯ ಸಂಸ್ಕೃತಿ ಮೈಸೂರು ದಸರಾ !

Kannada News

20-09-2017

ಮೈಸೂರು: ಮೈಸೂರು ದಸರಾ ಮಹೋತ್ಸವ ಅಂದರೆ ಸಾಮಾನ್ಯ ಅಲ್ಲ. ಕರ್ನಾಟಕದ ಹೆಮ್ಮೆಯ ಸಂಸ್ಕೃತಿ ಮೈಸೂರು ದಸರಾ ಮಹೋತ್ಸವ. ಇತರೆ ಉತ್ಸಗಳು ಒಂದೊಂದು ಧರ್ಮ ಹಾಗೂ ಜಾತಿಗೆ ಸೀಮಿತವಾಗಿವೆ. ಆದರೆ ಎಲ್ಲ ಧರ್ಮ ಜಾತಿಯವರನ್ನು ಒಂದುಗೂಡಿಸುವುದೇ ಮೈಸೂರು ದಸರಾ ಮಮಹೋತ್ಸವ ಎಂದು ಮೈಸೂರಿನಲ್ಲಿ, 2017ನೇ ಸಾಲಿನ ದಸರಾ ಉದ್ಘಾಟಕರಾದ ನಾಡಿನ ಹಿರಿಯ ಕವಿ ನಿಸಾರ್ ಅಹ್ಮದ್ ಹೇಳಿದ್ದಾರೆ. ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ್ದು ಅಪಾರ ಸಂತಸ ತಂದಿದೆ. ಇದು ದೊಡ್ಡಗೌರವ ಸಿಕ್ಕಿದಂತೆ ಎಂದು ಸಂತೋಷ ಹಂಚಿಕೊಂಡರು. ಮೈಸೂರೆಂದರೆ ನನಗೆ ಅಪಾರ ಅಭಿಮಾನ, ಇದು ಕುವೆಂಪು ಅವರು ಇದ್ದ ಊರು. ಇಲ್ಲಿನ ರಾಜಮನೆತನದ ಬಗ್ಗೆ ನನಗೆ ಗೌರವ ಇದೆ. ಈ ಬಾರಿಯ ದಸರಾದಿಂದ ರಾಜ್ಯಕ್ಕೆ ಸುಭಿಕ್ಷೆ ದೊರೆಯಲಿ, ಉತ್ತಮ ಮಳೆಯಾಗಿ ರಾಜ್ಯ ಹಾಗೂ ದೇಶದ ಜನ ಸಮೃದ್ದಿಯಾಗಿ ಜೀವನ ನಡೆಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.  

 

 

 

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ