ಎಸ್ಐಟಿಗೆ ಸಂಪೂರ್ಣ ಅಧಿಕಾರ !

Kannada News

20-09-2017 200

ಮಂಗಳೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ. ಖಾದರ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಅವಹೇಳನಕಾರಿ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ, ಮಂಗಳೂರಿನಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಪೊಲೀಸ್ ಅಧಿಕಾರಿಯ ವಿರುದ್ಧ ಅವಹೇಳನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿ, ದೂರು ದಾಖಲು ಯಾಕೆ ಮಾಡಿಲ್ಲ ಎಂದು ಎಸ್.ಪಿ ಸುಧೀರ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಕೂಡಲೇ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.

 ಇನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾತನಾಡಿ, ಪ್ರಕರಣದ ತನಿಖೆ ನಡಿತಿದೆ ಎಸ್.ಐ.ಟಿಗೆ ಸಂಪೂರ್ಣ ಅಧಿಕಾರ ನೀಡಿದ್ದೇನೆ, ಗೌರಿ ಲಂಕೇಶ್ ಸೇರಿದಂತೆ ಕಲಬುರ್ಗಿ ಹತ್ಯೆ ಪ್ರಕರಣವನ್ನೂ ಬೇಧಿಸುತ್ತೇವೆ ಎಂಬ ನಂಬಿಕೆ ಇದೆ. ಪ್ರಕರಣ ಭೇದಿಸಲು ಸಮಯಾವಕಾಶ ಅಗತ್ಯ ಇದೆ ಎಂದಿದ್ದಾರೆ.

ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯರಿಂದ ಸಲಹೆ ವಿಚಾರ, ಅವಶ್ಯಕತೆ ಇದ್ದಾಗ ಗೃಹ ಇಲಾಖೆಯ ಸಲಹೆಗಾರರ ಸಲಹೆ ಪಡೆಯುತ್ತೇನೆ ಎಂದು ತಿಳಿಸಿದರು.

ಅಲ್ಲದೇ ರಾಜ್ಯ ಸರ್ಕಾರದಿಂದ ಪೋನ್ ಕದ್ದಾಲಿಕೆ ವಿಚಾರವಾಗಿ, ಇವರ ಪೋನ್ ಕದ್ದಾಲಿಕೆ ಮಾಡೋ ಅವಷ್ಯಕತೆ ಇಲ್ಲ, ಬಿಜೆಪಿ ಮುಂದೇನು ಅಧಿಕಾರಕ್ಕೆ ಬರಲ್ಲ.  ಕೇಂದ್ರ ಸರ್ಕಾರ ಪೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಉತ್ತರಿಸಿದರು.

ಮಂಗಳೂರಿನಲ್ಲಿ ಮೀಟರ್ ಬಡ್ಡಿ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ, ಪಿ.ಜಿ.ಗಳಿಂದ ಅಕ್ಕಪಕ್ಕದ ಮನೆಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರೋ ವಿದೇಶಿ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಿಬೇಕು, ಹೆಣ್ಮಕ್ಕಳು ಓದುವ ಶಿಕ್ಷಣ ಸಂಸ್ಥೆಗಳ ಕಡೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.  
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ