ಹಣಕ್ಕಾಗಿ ಯುವತಿ ಮೇಲೆ ಹಲ್ಲೆ !

Kannada News

20-09-2017

ಉಡುಪಿ: ಯುವತಿಗೆ ದೊಣ್ಣೆಯಿಂದ ಹೊಡೆದು, ದುಷ್ಕರ್ಮಿಗಳು ಹಣ ದರೋಡೆ ಮಾಡಿರುವ ದಾರುಣ ಘಟನೆಯು, ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದಾಪುರದ ರಟ್ಟಾಡಿ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಪ್ರೀತಿ (24) ಎಂಬ ಯುವತಿ ಮೇಲೆ ಮಾರಣಾಂತಿಕ ಹಲ್ಲೆಗೆ ಒಳಗಾದ ಯುವತಿ. ಈಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿಯಾಗಿದ್ದು, ರಟ್ಟಾಡಿ ಗ್ರಾಮದ ಎರಡು ಒಕ್ಕೂಟದಿಂದ ಹಣ ಸಂಗ್ರಹಿಸಿದ್ದಳು. ಇದನ್ನು ಹೊಂಚು ಹಾಕಿ ಕುಳಿತಿರುವಂತೆ ಕಾದಿದ್ದ ದುಷ್ಕರ್ಮಿಗಳು, ಸೇವಾನಿರತರ ಕಚೇರಿಗೆ ಬಂದು ಯುವತಿಗೆ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಹಾಕಿ ಬಂದಿದ್ದರು ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳು ಸುಮಾರು 2 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಇನ್ನು ಗಾಯಾಳು ಪ್ರೀತಿಯನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ