ಖಾಸಗಿ ದರ್ಬಾರ್: ಸಾರ್ವಜನಿಕರಿಗೆ ನಿರ್ಬಂಧ !

Kannada News

20-09-2017 434

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ, ಜಗತ್ಪ್ರಸಿದ್ದ ಐತಿಹಾಸಿಕ ಅರಮನೆಯಲ್ಲಿ ರಾಜಮನೆತನದ ಖಾಸಗಿ ದರ್ಬಾರ್ ನಡೆಯಲಿರುವುದರಿಂದ ಆಯ್ದ ಕೆಲದಿನಗಳಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸೆಪ್ಟೆಂಬರ್ 21 ರಿಂದ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನವರಾತ್ರಿಯ ಖಾಸಗಿ ದರ್ಬಾರು ಆರಂಭಿಸಲಿರುವ ಹಿನ್ನೆಲೆಯಲ್ಲಿ ನಾಳೆ  ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸೆಪ್ಟೆಂಬರ್ 29 ರಂದು ಆಯುಧ ಪೂಜೆ ಹಾಗೂ ಸೆಪ್ಟೆಂಬರ್ 30ರಂದು ವಿಜಯದಶಮಿಯ ಜಂಬೂಸವಾರಿ ಮೆರವವಣಿಗೆಯ ಪ್ರಯುಕ್ತ ಆ ಎರಡೂ ದಿನಗಳ ಕಾಲ ಅರಮನೆಯ ಒಳಾವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಬರುವ ಅಕ್ಟೋಬರ್ 14ರಂದು ಚಿನ್ನದ ಸಿಂಹಾಸನವನ್ನು ಕಳಚಿ ಮತ್ತೆ ಸ್ವಸ್ಥಾನಕ್ಕೆ ಸೇರಿಸಲಿರುವ ಹಿನ್ನೆಲೆಯಲ್ಲಿ ಅಂದು ಕೂಡ ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಮೈಸೂರು ಅರಮನೆ ಆಡಳಿತ ಮಂಡಳಿಯಿಂದ ಮಾಹಿತಿ ಲಭ್ಯವಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ