ಸಿಎಂ ಅಷ್ಟು ಸುಳ್ಳು ಹೇಳೋರು ಎಲ್ಲೂ ಇಲ್ಲ..?

Kannada News

20-09-2017

ಕೊಪ್ಪಳ: ನಾನು ಮುಖ್ಯ ಮಂತ್ರಿಯಾಗಿದ್ದಾಗ ಕೃಷ್ಣ ‘ಬಿ ಸ್ಕೀಂ’ ಯೋಜನೆಗೆ ಚಾಲನೆ ನೀಡಿದ್ದೆ, 1600 ಕೋಟಿ ಅನುದಾನದಲ್ಲಿ ಅಡಿಗಲ್ಲು ಸಮಾರಂಭ, ಸುಮಾರು 800 ಕೋಟಿ ಟೆಂಡರ್ ಮೂಲಕ ಬಿಜೆಪಿ ಕಾರ್ಯಕ್ರಮ ಆರಂಭ ಮಾಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಇದುವೆರಗೂ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿಂದು ಮಾತನಾಡಿದ ಅವರು, ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಏತನೀರಾವರಿ ಯೋಜನೆ, ಆಧುನಿಕ ತಂತ್ರಜ್ಞಾನದಮೂಲಕ ಹನಿ ನೀರಾವರಿ ಒದಗಿಸುವ ಯೋಜನೆಯಾಗಿದೆ ಎಂದರು.  

ನಾನು ಲಜ್ಜಗೆಟ್ಟ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಕೇಳುತ್ತೇನೆ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ರು, ವರ್ಷಕ್ಕೆ ಇಂತಿಷ್ಟು ಹಣ ನೀರಾವರಿಗೆ ಯೋಜನೆಗೆ ಕೊಡುವುದಾಗಿ ಹೇಳಿದ್ದರು, ಆದರೆ  ಕಳೆದ ನಾಲ್ಕು ವರ್ಷದಲ್ಲಿ ಕಾಂಗ್ರೆಸ್ ನೀರಾವರಿಯ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ನೀವು ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ.  ರಾಜ್ಯ ಬಿಟ್ಟು ತೊಲಗಿಸಲು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಸಿದ್ದರಾಮಯ್ಯರಷ್ಟು ಹಸಿ ಸುಳ್ಳು ಹೇಳುವ ವ್ಯಕ್ತಿ ಎಲ್ಲೂ ಸಿಗಲ್ಲ,  ಪ್ರಧಾನಿ ಕಡೆ ಬೊಟ್ಟು ಮಾಡುವ ಕೆಲಸ ಮಾಡ್ತಾರೆ. ಕೇಂದ್ರ ಫೋನ್ ಕದ್ದಾಲಿಕೆ ಮಾಡುತ್ತಿರೋದು ಸತ್ಯಕ್ಕೆ ದೂರದ ಮಾತು, ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಬೋಟ್ಟು ತೋರಿಸುತ್ತಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ