ಆಟೋ-ಹಾಲಿನ ವಾಹನ ಮುಖಾಮುಖಿ ಡಿಕ್ಕಿ !

Kannada News

20-09-2017

ಚಿತ್ರದುರ್ಗ: ಆಟೋ ಮತ್ತು ಹಾಲಿನ ವಾಹನ ನಡುವೆ ಭೀಕರ ಅಪಘಾತವಾಗಿದ್ದು, ಆಟೋದಲ್ಲಿ ಕಂಬಿ ಮೇಲೆ ಕುಳಿತಿದ್ದ ವ್ಯಕ್ತಿ ವಾಹನದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮೂವರಿಗೆ ಗಂಭಿರ ಗಾಯಗಳಾಗಿದ್ದು, ಗಾಯಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಾತ್ರಿಕೆನಹಳ್ಳಿ ಬಳಿ ಈ ದುರ್ಘಟನೆ ನಡೆದಿದೆ. ಕೂಲಿ ಕೆಲಸಕ್ಕೆ, ಆಟೋದಲ್ಲಿದ್ದ ಕುರುಬರಹಳ್ಳಿಯಿಂದ ತೆರಳುತ್ತಿದ್ದ ಗೋಪಿ(35) ಮೃತ ದುರ್ದೈವಿ. ವಾಣಿವಿಲಾಸಪುರದಿಂದ ಹಿರಿಯೂರಿಗೆ ತೆರಳುತ್ತಿದ್ದ ಆಟೋಗೆ ಕುರುಬರಹಳ್ಳಿಗೆ ಹೋಗುತ್ತಿದ್ದ ಹಾಲಿನ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಇನ್ನು ಅಪಘಾತದಿಂದ ರಸ್ತೆಯ ತುಂಬೆಲ್ಲಾ ಹಾಲು ಚೆಲ್ಲಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ