ಸಿಎಂಗೆ ಘೇರಾವ್ ವ್ಯಕ್ತಿ ಬಂಧನ !

Kannada News

20-09-2017

ಕೋಲಾರ: ಇಂದು ಕೋಲಾರಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ಜಿಲ್ಲೆಯ ನೂತನ ಜಿಲ್ಲಾಡಳಿತ ಭವನ ಉದ್ಘಾಟನೆ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಹಾಸ್ಪೆಟಲ್, ಕನ್ನಡ ಭವನ, ಪದವಿ ವಿದ್ಯಾರ್ಥಿಗಳಿಗೆ ರೆಸಿಡೆನ್ಸಿಯಲ್ ಕಾಲೇಜು, ಕೋಲಾರಕ್ಕೆ ಪ್ರತ್ಯೇಕ ಹೊಸ ವಿಶ್ವವಿದ್ಯಾಲಯ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸಿಎಂ ಆಗಮನದ‌‌ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕೋಲಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಸಿಎಂಗೆ ಘೇರಾವ್ ಹಾಕುವ ಬಗ್ಗೆ ಸಾಮಾಜಿಕ ಜಾಲತಣದಲ್ಲಿ ಪ್ರಚಾರ ಮಾಡಿದ ವಿದ್ಯಾರ್ಥಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ಗಳ ಮೂಲಭೂತ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಘರಾವ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದ, ವಿದ್ಯಾರ್ಥಿ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೂವಳ್ಳಿ ನಾಗರಾಜ್ ಅವರನ್ನು ಕೊಲಾರದ ಗ್ರಾಮಾಂತದ ಪೊಲೀಸಲು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ