ಕಾಮುಕನಿಗೆ ಸಖತ್ ಗೂಸ !

Kannada News

20-09-2017

ಬೆಳಗಾವಿ: ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಕಾಮುಕನಿಗೆ ಸ್ಥಳೀಯರೇ ಗೂಸಾ ನೀಡಿದ್ದಾರೆ. ಘಟನೆಯು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣದಲ್ಲಿ ನಡೆದಿದೆ. ತುಕರಾಮ್ ದೊಡ್ಡಶಿವಪ್ಪಗೊಳ (41) ಲೈಂಗಿಕ ‌ಕಿರುಕಳ ನೀಡುತ್ತಿದ್ದ ವ್ಯಕ್ತಿ. ತುಕರಾಮ್ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ, ಬೆಳಗ್ಗೆಯಿಂದ ಸಂಜೆವರೆಗು ಇರುತ್ತಿದ್ದ. ಇನ್ನು ಇಲ್ಲಿ ಸುಮ್ಮನಿರದ ಈತ ಬಸ್ ನಿಲ್ದಾಣದಲ್ಲಿ ಒಬ್ಬಂಟಿ ಮಹಿಳೆಯ ಮೇಲೆ ತನ್ನ ಚೇಷ್ಟೆ ತೋರಿಸುತ್ತಿದ್ದ, ಈತನ ಕಾಟ ವಿಪರೀತವಾಗಿದ್ದು, ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ. ಎಂದಿನಂತೆ ಇಂದು ಕೂಡ ತನ್ನ ಚಾಳಿ ಮುಂದುವೆರೆಸಲು ಮುಂದಾದಾಗ, ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಈತನನ್ನು ಹಿಡಿದು ಸಖತ್ ಆಗಿ ಗೂಸಾ ನೀಡಿದ್ದಾರೆ, ಮತ್ತು ಆರೋಪಿಯನ್ನು  ಮೂಡಲಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ