ದೋಣಿ ಮುಳುಗಿ ಕಾರ್ಮಿಕ ಸಾವು !

Kannada News

19-09-2017

ಕಾರವಾರ: ಅಘುನಾಶಿನಿ ನದಿಯಲ್ಲಿ ಮರಳು ತೆಗೆಯಲು 7 ಮಂದಿ ಕಾರ್ಮಿಕರ ತಂಡ, ದೋಣಿಯಲ್ಲಿ  ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿ, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಘನಾಶಿನಿ ನದಿಯಲ್ಲಿ ದುರ್ಘಟನೆ ನಡೆದಿದೆ. ಕೃಷ್ಣ ಬಂಡಾರಿ(20) ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ. ಏಳು ಜನರ ತಂಡ ಅಘನಾಶಿನಿ ನದಿಯಲ್ಲಿ ಮರಳು ತೆಗೆಯಲು ಹೋದಾಗ ದೋಣಿ ಮುಳುಗಡೆಯಾಗಿತ್ತು. ಈ ವೇಳೆ ಆರು ಜನರನ್ನು ರಕ್ಷಿಸಲಾಗಿದ್ದು, ಒಬ್ಬರು ಮೃತ ಪಟ್ಟಿದ್ದಾನೆ. ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ