ಬಿಜೆಪಿ ನಮ್ಮ ಪೋನ್ ಕದ್ದಾಲಿಕೆ ಮಾಡ್ತಿದೆ..?

Kannada News

19-09-2017

ಬೆಂಗಳೂರು: ಸಿಎಂ ವಿರುದ್ಧ, ಬಿ.ಎಸ್.ವೈ ಜಾರ್ಜ್ ಶೀಟ್ ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಯಾವಾಗಲು ಸುಳ್ಳನ್ನೆ ಹೇಳೊದು. ಅವರು ಯಾವತ್ತಾದರೂ ಸತ್ಯ ಹೇಳಿದ್ದಾರಾ ಎಂದು ವ್ಯಂಗವಾಡಿದರು. ಅವರು ಇನ್ನೆನು ಜಾರ್ಜ್ ಶೀಟ್ ಬಿಡುಗಡೆ ಮಾಡ್ತಾರೆ, ಅವರ ಮಾತಿಗೆಲ್ಲ ನಾನು ಉತ್ತರಿಸೊದಿಲ್ಲ ಎಂದರು.                       

ಇನ್ನು ಪೋನ್ ಕದ್ದಾಲಿಕೆ ವಿಚಾರವಾಗಿ ಮಾತನಾಡಿ, ಫೋನ್ ಕದ್ದಾಲಿಕೆ ನಾವು ಮಾಡ್ತಾ ಇಲ್ಲ. ಕೇಂದ್ರ ಸರ್ಕಾರವೇ ನಮ್ಮ ಪೋನ್ ಕದ್ದಾಲಿಕೆ ಮಾಡ್ತಾ ಇರೋದು, ನಾವು ಇದರ ಬಗ್ಗೆ ಮಾತಾಡಲ್ಲ, ಯಾಕೆಂದ್ರೆ ಅದೆಲ್ಲಾ ಚಿಲ್ಲರೆ ವಿಚಾರ ಎಂದರು.

ಅಷ್ಟೇ ಅಲ್ಲದೇ ಸಿಎಂ ಕೋಲಾರ ದಿಂದ ಸ್ಪರ್ಧೆ ಮಾಡಬೇಕೆಂದು ಸುದರ್ಶನ್ ಸೋನಿಯಾ ಗಾಂಧಿಗೆ ಪತ್ರ ಬರೆದಿರುವಿದರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾನು 224 ಕ್ಷೇತ್ರದಲ್ಲಿ ಎಲ್ಲಿನಿಂತರು ಗೆಲ್ಲುತ್ತೇನೆ. ಆದರೆ ಹೈಕಮಾಂಡ್ ಎಲ್ಲಿ ನಿಲ್ಲಬೇಕೆಂದು ನಿರ್ಧರಿಸುತ್ತೊ ಅಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ