ಇಲ್ಲಿ ವ್ಯಾಪಾರಿಗಳಿಗೂ ರಕ್ಷಣೆ ಇಲ್ಲ !

Kannada News

19-09-2017

ಕಾರವಾರ: ಸೆಪ್ಟೆಂಬರ್ 16 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ, ಭಟ್ಕಳದ ರಾಮಚಂದ್ರ ನಾಯ್ಕ ಅವರ ಮನೆಗೆ, ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ರಾಮಚಂದ್ರ ನಾಯ್ಕ ಅವರು, ಭಟ್ಕಳ ಪುರಸಭೆ ಮಳಿಗೆ ವಿಚಾರದಲ್ಲಿ ನೊಂದು ಆತ್ಮಹತ್ಯೆ ಶರಣಾಗಿದ್ದರು ಎನ್ನಲಾಗಿದೆ.

ಇನ್ನು ಆಸರಕೇರಿಯ ಮೃತ ರಾಮಚಂದ್ರ ನಾಯ್ಕ ಅವರ ಮನೆಗೆ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ನಂತರ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, ಅಂಗಡಿಕಾರ ರಾಮಚಂದ್ರ ನಾಯ್ಕ ಸಾವಿಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಪೊಲೀಸರು, ಅಧಿಕಾರಿಗಳ ಸಮ್ಮುಖದಲ್ಲೆ ರಾಮಚಂದ್ರ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮಚಂದ್ರನದು ವ್ಯವಸ್ಥಿತ ಕೊಲೆ ಎಂದು ಹರಿಹಾಯ್ದರು. ಸರ್ಕಾರ ಹಿಂದುಗಳ ಧಮನ ನೀತಿ ಅನುಸರಿಸುತ್ತಿದೆ, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ  ಮಾಡುತ್ತಿದೆ. ಸಚಿವರಾದ ರಮಾನಾಥ್ ರೈ, ಯು.ಟಿ.ಖಾದರ್ ಕುಮ್ಮುಕ್ಕಿನಂದಲೇ ಶರತ್ ಮಡಿವಾಳ ಕೊಲೆಯಾಯ್ತು, ಸಿದ್ದರಾಮಯ್ಯ ಸರ್ಕಾರದಲ್ಲಿ ವ್ಯಾಪಾರಿಗಳಿಗೂ ರಕ್ಷಣೆಯಿಲ್ಲ ಎಂದು ಕಿಡಿಕಾರಿದರು. ಪುರಸಭೆ ಕಟ್ಟಡ ದಾಳಿಗೆ ಸಂಬಂಧಿಸಿದಂತೆ ಬಿಜೆಪಿಗರನ್ನು ಹುಡುಕಿ ಹುಡುಕಿ ಕೇಸ್ ಹಾಕುತ್ತಿರುವುದೇಕೆ.? ಕೂಡಲೇ ದರೋಡೆ, ಗೂಂಡಾ ಕೇಸ್ ಗಳನ್ನ ವಾಪಾಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಭಟ್ಕಳವನ್ನ ಮತ್ತೊಂದು ಕಲ್ಲಡ್ಕವನ್ನಾಗಿ ಮಾಡಬೇಡಿ, ರಾಮಚಂದ್ರ ನಾಯ್ಕ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ