ಹಳ್ಳಕೊಳ್ಳ ರಸ್ತೆಗಳ ವೀಡಿಯೊ ವೈರಲ್ !

Kannada News

19-09-2017

ಮೈಸೂರು: ಮೈಸೂರಿನ ರಸ್ತೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಸಾರ್ವಜನಿಕರು, ರಸ್ತೆಗಳ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ಯಾಗಿದ್ದು, ವಾಹನ ಸವಾರರು, ಪಾದಾಚಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ಮೈಸೂರು ನಗರ ಪಾಲಿಕೆಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗದಿದ್ದು, ಸಾರ್ವಜನಿಕರು ಈ ಕ್ರಮಕ್ಕೆ ಮುಂದಾಗಿದ್ದಾರೆ.  ವಿಶ್ವವಿಖ್ಯಾತ ದಸರಾ ಮಹೋತ್ಸವ ಬಂದರೂ ರಸ್ತೆಗಳಲ್ಲಿ ಹಳ್ಳ ಗುಂಡಿಗಳು ಮುಚ್ಚಿಲ್ಲ. ಮೈಸೂರಿನ ಪ್ರಮುಖ ರಸ್ತೆಗಳ ಹಳ್ಳ ಗುಂಡಿಗಳ ವೀಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು, ವೈರಲ್ ಮಾಡಿ ಗಮನ ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಈಗ ಹಳ್ಳಕೊಳ್ಳಗಳ ನಗರಿ, ಎಂಬ 4 ನಿಮಿಷದ ವೀಡಿಯೊದಲ್ಲಿ ಮೈಸೂರಿನ ರಸ್ತೆಗಳ  ಪರಿಸ್ಥಿತಿಯ ದರ್ಶನ ಮಾಡಿಸಿದ್ದಾರೆ. ಅಲ್ಲದೇ ಕೂಡಲೆ ಎಚ್ಚೆತ್ತು ಅಧಿಕಾರಿಗಳು ಈ ಕುರಿತು ಗಮನಹರಿಸಬೇಕಾಗಿ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ