ಮದ್ಯ ಹೊತ್ತೊಯ್ದ ಕಳ್ಳರು !

Kannada News

19-09-2017

ಬೆಂಗಳೂರು: ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯ ಸಾಗರ್ ಬಾರ್ ನ, ಶೆಟರ್ ಮುರಿದು ಕಳ್ಳತನ ಮಾಡಿದ್ದಾರೆ. ಬಾರ್ ನಲ್ಲಿದ್ದ ಸಾವಿರಾರು ಮೌಲ್ಯ ಬೆಲೆ ಬಾಳುವ 10 ಬಾಕ್ಸ್ ಮದ್ಯದ ಬಾಟಲಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಶೆಟರ್ ಮುರಿದು ಬಾರ್ ಒಳಗೆ ನುಗ್ಗಿರುವ ಕಳ್ಳರು, ಮೊದಲು ಸಿಸಿಟಿವಿ ಇಲ್ಲದನ್ನ ಖಚಿತ ಪಡಿಸಿಕೊಂಡು, ಕೃತ್ಯ ಎಸಗಿದ್ದಾರೆ. ಎಂದಿನಂತೆ ಮಾಲೀಕ ಬಾರ್ ತೆಗೆಲು ಸ್ಥಳಕ್ಕೆ ಬಂದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಕೂಡಲೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ದೇವನಹಳ್ಳಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ