ಕಾರಾಗೃಹದಲ್ಲಿ ಮೊಬೈಲ್, ಗಾಂಜಾ ಪತ್ತೆ !

Kannada News

19-09-2017

ಮಂಗಳೂರು: ಮಂಗಳೂರಿನ ಕೇಂದ್ರ ಕಾರಗೃಹಕ್ಕೆ ಡಿಸಿಪಿ ತಂಡ ದಿಢೀರ್ ದಾಳಿ ನಡೆಸಿದೆ. ಮಂಗಳೂರಿನ ಕೊಡೀಯಲ್ ಬೈಲ್ ನಲ್ಲಿರುವ ಜೈಲಿಗೆ, ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ, 129 ಪೊಲೀಸ್ ಪೇದೆಗಳು, 50 ಪೊಲೀಸ್ ಅಧಿಕಾರಿಗಳಿಂದ ದಾಳಿ ಮಾಡಿದ್ದಾರೆ. ದಾಳಿ ವೇಳೆ 2 ಮೊಬೈಲ್, 1 ಗಾಂಜಾ ಪ್ಯಾಕೆಟ್, ಮೂರು ಚೂಪಾದ ವಸ್ತುಗಳು, ಹುಕ್ಕಾ ಮಾದರಿಯ ಪ್ಲಾಸ್ಟಿಕ್ ಬಾಟಲ್ ಗಳು, ಒಂದು ರಾಡ್ ಪತ್ತೆಯಾಗಿದೆ. ಈ ನಿಷೇಧಿತ ವಸ್ತುಗಳನ್ನು ಜಪ್ತಿಮಾಡಿರುವ ಪೊಲೀಸರು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ