ಸಿಎಂ ವಿರುದ್ಧ ದೂರು..

Kannada News

19-09-2017 355

ಮಂಡ್ಯ: ಅಧಿಕಾರ ದುರುಪಯೋಗ, ಅಕ್ರಮ ಗಣಿಗಾರಿಕೆಗೆ ನೆರವು, ಮೈಸೂರು ಮಹಾರಾಜರ ಸ್ವತ್ತು ಕಬಳಿಸುವವರಿಗೆ ಸಹಕಾರದ ಆರೋಪದಡಿ, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತು  ಎಸಿಬಿಗೆ, ಮಂಡ್ಯದ ಆರ್.ಟಿ.ಐ ಕಾರ್ಯಕರ್ತ, ಕೆ.ಆರ್.ರವೀಂದ್ರ ಅವರು ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೇ ಬೇಬಿಬೆಟ್ಟದ ಕಾವಲ್ ಸರ್ವೇ ನಂ.1ರಲ್ಲಿರುವ ರಾಜರ ಆಸ್ತಿ, ಈ ಪ್ರದೇಶದ 1623 ಎಕರೆಯಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಮಂಡ್ಯದ ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು, ಜಿಪಂ ಸದಸ್ಯ ಅಶೋಕ್, ಮೈಸೂರು ಪಾಲಿಕೆ ಜೆಡಿಎಸ್ ಸದಸ್ಯ ನಟರಾಜು ಸೇರಿದಂತೆ ಹಲವರಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಕೆ.ಆರ್.ರವೀಂದ್ರ ಅವರು ಆಗ್ರಹಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

ಮಂಡ್ಯ ಸಿಎಂ ವಿರುದ್ಧ ದೂರು..


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ