ನಿಧಿಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದರು !

Kannada News

19-09-2017

ಕೊಪ್ಪಳ: ನಿಧಿಗಾಗಿ ದೇವಸ್ಥಾನವನ್ನು ಬಿಡದ ದುಷ್ಕರ್ಮಿಗಳು, ದೇವಸ್ಥಾನದಲ್ಲಿ ಗುಂಡಿ ಅಗೆದು ಶೋಧಿಸಿದ್ದಾರೆ. ನಿಧಿಗಾಗಿ ಮಾರುತಿ ದೇವಸ್ಥಾನದಲ್ಲಿ ಗುಂಡಿ ಅಗೆದಿರುವ ಘಟನೆಯು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಮೆಣದಾಳ ಗ್ರಾಮದಲ್ಲಿ ನಡೆದಿದೆ. ಮೆಣದಾಳ ಗ್ರಾಮದ ಹೊರವಲಯದಲ್ಲಿರೋ ಮಾರುತಿ ದೇವಸ್ಥಾನದಲ್ಲಿ, ಹನುಮಂತನ ಮೂರ್ತಿ ಕಿತ್ತು ಮೂರು ಅಡಿಯಷ್ಟು ಗುಂಡಿ ತೋಡಿ ನಿಧಿಗಾಗಿ ಹುಡುಕಾಡಿದ್ದಾರೆ. ಮೂರ್ತಿಯ ಕೆಳಗಡೆ, ದೇವಸ್ಥಾನದ ಹಿಂದೆ  ಅಗೆದು ಶೋಧ ನಡೆಸಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಈ ಹಿಂದೆ ಇದೆ ದೇವಸ್ಥಾನದ ಕಳಸ ಕಳ್ಳತನ ಮಾಡಲಾಗಿತ್ತು.  ಇಂದು ಮುಂಜಾನೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಾವರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ನಿಧಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


fasdfads
  • fasdf
  • asdasd