ಭಿಕ್ಷೆ ಬೇಡುವ ಲ್ಯಾಪ್‍ ಟಾಪ್‍ ಕಳ್ಳರು..

Kannada News

18-09-2017 405

ಬೆಂಗಳೂರು: ಮೂಕರಂತೆ ನಟಿಸಿ ಭಿಕ್ಷೆ ಬೇಡುವ ನೆಪದಲ್ಲಿ, ಗಮನ ಬೇರೆಡೆ ಸೆಳೆದು ಲ್ಯಾಪ್‍ ಟಾಪ್‍ ಗಳನ್ನು ಅಪಹರಿಸುತ್ತಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿರುವ ಮಡಿವಾಳ ಪೊಲೀಸರು ಇಬ್ಬರನ್ನು ಬಂಧಿಸಿ 30 ಲಕ್ಷ ರೂ. ಬೆಲೆಬಾಳುವ 85 ಲ್ಯಾಪ್‍ಟಾಪ್‍ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಾದ ಮಣಿಕಂಠನ್ ಎಂಜಿನಿಯರಿಂಗ್ ಓದಿದ್ದು, ಶ್ರೀಮಂತನಾಗುವ ಆಸೆಯಿಂದ ತನ್ನ ಸ್ನೇಹಿತ ರಮೇಶ್ ಜೊತೆ ಸೇರಿ ಲ್ಯಾಪ್‍ ಟಾಪ್ ಕಳ್ಳತನಕ್ಕೆ ಇಳಿದಿದ್ದ ಎಂದು ಡಿಸಿಪಿ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಂಧಿತ ಆರೋಪಿಗಳಿಬ್ಬರು ಮೂಲತಃ ತಮಿಳುನಾಡಿನ ಆಂಬೂರ್ ನವರಾಗಿದ್ದು, ಅಲ್ಲಿಂದಲೇ ತನ್ನ ಆರೇಳು ಮಂದಿ ಸಹಚರರೊಡನೆ ಬಂದು ನಗರದಲ್ಲಿ ಲ್ಯಾಪ್‍ ಟಾಪ್ ಕಳ್ಳತನ ನಡೆಸುತ್ತಿದ್ದ ಎಂದು ಅವರು ಹೇಳಿದರು.

ಮೂಕರಂತೆ ನಟಿಸುತ್ತಿದ್ದ ಆರೋಪಿಗಳು ಪಿಜಿಗಳು, ರೂಂ ಗಳಲ್ಲಿ ಒಂಟಿಯಾಗಿ ವಾಸ ಮಾಡುವವರನ್ನು ಗುರುತಿಸಿ, ಭಿಕ್ಷೆ ಬೇಡುವ ನೆಪದಲ್ಲಿ ಹೋಗಿ ಗಮನ ಬೇರೆಡೆ ಸೆಳೆದು ಲ್ಯಾಪ್‍ ಟಾಪ್‍ ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಮಡಿವಾಳ, ಕೋರಮಂಗಲ, ಬ್ಯಾಟರಾಯನಪುರ, ಎಚ್.ಎಸ್.ಆರ್ ಲೇಔಟ್, ಸಿದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವರುಗಳು ಕೃತ್ಯವೆಸಗಿದ್ದರು. ಇದೀಗ ಪೊಲೀಸರ ಬಲೆಗೆ ಸಿಕ್ಕಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ