ಯೋಧನ ಪತ್ನಿ ಶವ ಇನ್ನೂ ಪತ್ತೆಯಾಗಿಲ್ಲ !

Kannada News

18-09-2017

ಕೊಪ್ಪಳ: ಹಳ್ಳದಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ತಾಯಿ-ಮಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ನು ಪತ್ತೆಯಾಗದ ಯೋಧನ ಪತ್ನಿ ಶವ. ರಾಜಸ್ಥಾನದಲ್ಲಿ ಯೋಧನಾಗಿರುವ ಬಸವರಾಜ ಪತ್ನಿ ಪಾರವ್ವ(21) ಕಳೆದ ಸೆ.16 ರಂದು, ಭಾರಿ ಮಳೆಗೆ  ಹಳ್ಳದಲ್ಲಿ ತಾಯಿ-ಮಗಳು ಕೊಚ್ಚಿಹೋಗಿದ್ದರು. ಸುಮಾರು 40 ಗಂಟೆಯಿಂದ ಕಾರ್ಯಾಚರಣೆ ಮಾಡಿದ್ರೂ ಇನ್ನೂ ಶವ ಪತ್ತೆಯಾಗಿಲ್ಲ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪಾರವ್ವನ ಮೃತದೇಹಕ್ಕಾಗಿ ಅಗ್ನಿಶಾಮಕದಳ, ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. ನಿನ್ನೆ ಬೆಳಿಗ್ಗೆ ತಾಯಿ ಹನಮವ್ವಳ ಮೃತದೇಹ ಪತ್ತೆಯಾಗಿತ್ತು. ಹಳ್ಳದ ಮರಳಲ್ಲಿ ಪಾರವ್ವನ ಮೃತ ದೇಹ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ