ಉಪ್ಪಿಗೆ ಹುಟ್ಟ ಹಬ್ಬ: ಫ್ಯಾನ್ ಗಳಿಗೆ ಬೆತ್ತದೇಟು !

Kannada News

18-09-2017

ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟ ಉಪ್ಪಿ, ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.  ಮಳೆಯ ನಡುವೆಯು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ತಮ್ಮ ನೆಚ್ಚಿನ ತಾರೆಯನ್ನು ನೋಡಿ, ಶುಭಕೋರಲು ಆಗಮಿಸಿದ್ದರು. ಕತ್ರಿಗುಪ್ಪೆ ಮನೆ ಬಳಿ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮಾಚರಣೆ ಮಾಡಿದರು.  ಉಪೇಂದ್ರ ಅವರಿಗೆ ಶುಭಾಷಯ ಕೋರಿದ ನೂರಾರು ಅಭಿಮಾನಿಗಳು ಸಹಿ ಹಂಚಿ, ಉಪೇಂದ್ರ ಮತ್ತವರ ಪತ್ನಿ ನಟಿ ಪ್ರಿಯಾಂಕ ಸೇರಿದಂತೆ ಕುಟುಂಬಸ್ಥರ ಜೊತೆ ಉಪ್ಪಿ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರವನ್ನು ಮಾಡಿದರು. ಆದರೆ ಇವೆಲ್ಲವನ್ನು ಲೆಕ್ಕಿಸದ ಅಭಿಮಾನಿಗಳು ಮಾತ್ರ  ಸಾಲು ಗಟ್ಟಿ ನಿಂತು ಉಪ್ಪಿಗೆ ಶುಭಾಶಯ ಕೋರಿದರು. ಅದಲ್ಲದೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಂದ ಉಪ್ಪಿ ಮನೆ ಬಳಿ ಬಂದೋಬಸ್ತ್ ಮಾಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ