ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ ಜನ !

Kannada News

18-09-2017 389

ದೊಡ್ಡಬಳ್ಳಾಪುರ: ಬಸ್ ಸಮಸ್ಯೆಯಿಂದ ಕಂಗೆಟ್ಟಿದ್ದ, ವಿದ್ಯಾರ್ಥಿಗಳು ಮತ್ತು ನೌಕರರು, ತಾಳ್ಮೆ ಕಳೆದುಕೊಂಡು, ಶಾಸಕ ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ,ಬಿ.ಎಂ.ಟಿ.ಸಿ ಅಧಿಕಾರಿಗಳನ್ನು, ವಿದ್ಯಾರ್ಥಿಗಳು ಮತ್ತು ನೌಕರರು ತರಾಟೆಗೆ ತೆಗೆದುಕೊಂಡ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.  ದಿನ ನಿತ್ಯ ದೊಡ್ಡಬಳ್ಳಾಪುರ ಹಳೇ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ನೌಕರರು, ಬೆಳಗಿನ ಸಮಯದಲ್ಲಿ ಬಸ್ ಗಳಿಲ್ಲದೆ ಪರದಾಡುತ್ತಿದ್ದರು. ಇದು ಹೀಗೆಯೇ ಮುಂದುವರಿಯುತ್ತಿದ್ದು, ರೊಚ್ಚಿಗೆದ್ದ ಜನ, ಇಂದು ಬೆಳಿಗ್ಗೆ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಶಾಸಕ ವೆಂಕಟರಮಣಯ್ಯ, ಅವರೊಂದಿಗೆ ಕೆ.ಎಸ್.ಆರ್.ಟಿ.ಸಿ. ಬಿ.ಎಂ.ಟಿ.ಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೆ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ